ಬಂಟ್ವಾಳ, ಆಗಸ್ಟ್ 04, 2025 (ಕರಾವಳಿ ಟೈಮ್ಸ್) : ರಸ್ತೆ ಕಾಂಕ್ರಿಟ್ ವಿಚಾರದಲ್ಲಿ ವ್ಯಕ್ತಿಯೋರ್ವರಿಗೆ ನಾಲ್ವರ ತಂಡ ಹಲ್ಲೆ ನಡೆಸಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಹಲ್ಲೆಗೊಳಗಾದ ಮಾಣಿ ಗ್ರಾಮದ ಸಾಗು ಹೊಸಮನೆ ನಿವಾಸಿ ಉಮೇಶ್ ಮಹಾಬಲ ಶೆಟ್ಟಿ (57) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ಜುಲೈ 22 ರಂದು ಸಂಜೆ 7 ಗಂಟೆಗೆ ಅವರ ಕುಟುಂಬದ ಮನೆಯಾದ ಮಾಣಿ ಗ್ರಾಮದ ಸಾಗು ಹೊಸ ಮನೆ ಎಂಬಲ್ಲಿ ಅವರ ತಂದೆಯವರ ಆತ್ಮಶುದ್ದಿ ಕಾರ್ಯಕ್ರಮಕ್ಕೆ ಹೋದಾಗ ಆರೋಪಿಗಳಾದ ಹರೀಶ್ ಕುಮಾರ್ ಎಂ ಶೆಟ್ಟಿ, ಸುರೇಶ ಎಂ ಶೆಟ್ಟಿ, ಜಯರಾಮ ಶೆಟ್ಟಿ, ಆಕಾಶ ಅಗರ್ವಾಲ್ ಎಂಬವರು ಹೊಸದಾಗಿ ಅವರ ಮನೆಗೆ ಹೋಗಲು ನಿರ್ಮಿಸಿದ ಕಾಂಕ್ರೀಟ್ ರಸ್ತೆಯಲ್ಲಿ ಕ್ಯೂರಿಂಗ್ ವಿಚಾರದಲ್ಲಿ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿ ಕೈಯಿಂದ ಹಲ್ಲೆ ನಡೆಸಿರುತ್ತಾರೆ ಎಂದು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment