ಪುಂಚಮೆ : ಹಾಡಹಗಲೇ ಕೃಷಿಕನ ಮನೆಗೆ ನುಗ್ಗಿ ತೆಂಗಿನಕಾಯಿ, ಅಡಿಕೆ, ನಗದು ಕಳವು - Karavali Times ಪುಂಚಮೆ : ಹಾಡಹಗಲೇ ಕೃಷಿಕನ ಮನೆಗೆ ನುಗ್ಗಿ ತೆಂಗಿನಕಾಯಿ, ಅಡಿಕೆ, ನಗದು ಕಳವು - Karavali Times

728x90

6 August 2025

ಪುಂಚಮೆ : ಹಾಡಹಗಲೇ ಕೃಷಿಕನ ಮನೆಗೆ ನುಗ್ಗಿ ತೆಂಗಿನಕಾಯಿ, ಅಡಿಕೆ, ನಗದು ಕಳವು

ಬಂಟ್ವಾಳ, ಆಗಸ್ಟ್ 06, 2025 (ಕರಾವಳಿ ಟೈಮ್ಸ್) : ಮನೆಗೆ ನುಗ್ಗಿದ ಕಳ್ಳರು ಸಾವಿರಾರು ರೂಪಾಯಿ ಮೌಲ್ಯದ ಸೊತ್ತುಗಳು ಹಾಗೂ ನಗದು ಹಣವನ್ನು ಕಳವುಗೈದ ಘಟನೆ ಕರಿಯಂಗಳ ಗ್ರಾಮದ ಪುಂಚಮೆ ಎಂಬಲ್ಲಿ ಆಗಸ್ಟ್ 4 ರಂದು ಹಾಡಹಗಲೇ ಸಂಭವಿಸಿದೆ. 

ಇಲ್ಲಿನ ನಿವಾಸಿ ಚಂದ್ರಹಾಸ ಪಲ್ಲಿಪ್ಪಾಡಿ (40) ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಇವರಿಗೆ ಕೃಷಿ ಜಮೀನು ಇದ್ದು ಇದರ ಪಕ್ಕದಲ್ಲಿ ಕೃಷಿಯ ಕೆಲಸವನ್ನು ಮಾಡುವ ಕೆಲಸಗಾರರು ವಾಸ ಮಾಡುವ ಮನೆ ಇರುತ್ತದೆ. ಈ ಮನೆಯಲ್ಲಿ  ಕೃಷಿ ಜಮೀನಿನಲ್ಲಿ ಕೆಲಸ ಮಾಡುವ ಧನಂಜಯ ಗೋಡ್ ಮತ್ತು ಪಾಸ್ವಾನ್ ಉತ್ತರ ಪ್ರದೇಶ ಕೆಲಸಗಾರರು ವಾಸ ಮಾಡಿಕೊಂಡಿರುತ್ತಾರೆ. ಆ 4ರಂದು ಕೃಷಿ ಜಮೀನಿನಲ್ಲಿ ಕೆಲಸ ಮಾಡುವ ಕೆಲಸಗಾರರು ಅವರು ವಾಸ ಮಾಡುವ ಮನೆಯಿಂದ ಕೆಲಸದ ಬಗ್ಗೆ ತೋಟಕ್ಕೆ  ಹೋಗಿ ಕೆಲಸ ಮಾಡಿ ಮದ್ಯಾಹ್ನ ಮನೆಗೆ ಬಂದು ಊಟ ಮಾಡಿ ಮದ್ಯಾಹ್ನ ಸುಮಾರು 2 ಗಂಟೆಗೆ ಮನೆಯ ಬಾಗಿಲು ಹಾಕಿ ಕೃಷಿ ಜಮೀನಿಗೆ ಹೋಗಿದ್ದರು. ನಂತರ ಸಂಜೆ ಸುಮಾರು 6 ಗಂಟೆಗೆ ಮನೆಗೆ ವಾಪಾಸ್ಸು ಬಂದಾಗ ಮನೆಯ ಹಿಂದಿನ ಬಾಗಿಲನ್ನು ತೆರೆದಿರುವುದು ಕಂಡು ಮಾಲಿಕ ಚಂದ್ರಹಾಸ ಅವರಿಗೆ ತಿಳಿಸಿದ್ದಾರೆ. ತಕ್ಷಣ ಮನೆಗೆ ಬಂದ ಚಂದ್ರಹಾಸ ಅವರು ನೋಡಿದಾಗ ಮನೆಯ  ಹಿಂದಿನ ಬಾಗಿಲಿನ ಚಿಲಕ ತೆರೆದು ಮನೆಯ  ಒಳಗೆ ಇರಿಸಿದ್ದ 1500/- ಮೌಲ್ಯದ ಸುಮಾರು 50 ತೆಂಗಿನ ಕಾಯಿ, ಸುಮಾರು 3 ಸಾವಿರ ರೂಪಾಯಿ ಮೌಲ್ಯದ ಸುಲಿಯದೆ ಇಟ್ಟಿದ್ದ 3 ಚೀಲ ಅಡಿಕೆ, ಮನೆಯ ಒಳಗೆ ಕಿಟಕಿಯಲ್ಲಿ ಇರಿಸಿದ್ದ 1,500/- ರೂಪಾಯಿ ನಗದು ಹಾಗೂ  ತೆಂಗಿನ ಕಾಯಿ ಸುಲಿಯುವ ಸಾಧನಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು  ಹೋಗಿರುತ್ತಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 6 ಸಾವಿರ ರೂಪಾಯಿ ಆಗಿರುತ್ತದೆ. ಈ ಬಗ್ಗೆ ಚಂದ್ರಹಾಸ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಪುಂಚಮೆ : ಹಾಡಹಗಲೇ ಕೃಷಿಕನ ಮನೆಗೆ ನುಗ್ಗಿ ತೆಂಗಿನಕಾಯಿ, ಅಡಿಕೆ, ನಗದು ಕಳವು Rating: 5 Reviewed By: karavali Times
Scroll to Top