ಧರ್ಮಸ್ಥಳ, ಆಗಸ್ಟ್ 05, 2025 (ಕರಾವಳಿ ಟೈಮ್ಸ್) : ಧರ್ಮಸ್ಥಳ ಡಿಪೋದಿಂದ ಹೊರಟಿದ್ದ ಕೆ ಎಸ್ ಆರ್ ಟಿ ಸಿ ಬಸ್ಸಿಗೆ ದ್ವಿಚಕ್ರ ವಾಹನ ಸವಾರನೋರ್ವ ಕಲ್ಲು ಎಸೆದು ಪರಾರಿಯಾಗಿರುವ ಘಟನೆ ಪುದುವೆಟ್ಟು ಕ್ರಾಸ್ ಬಳಿ ಮಂಗಳವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.
ಈ ಬಗ್ಗೆ ಕೆ ಎಸ್ ಆರ್ ಟಿ ಸಿ ಧರ್ಮಸ್ಥಳ ಘಟಕದ ಸಂಚಾರಿ ನಿಯಂತ್ರಕ ಪಿ ದಾವೂದ್ ಅವರು ಪೊಲೀಸರಿಗೆ ದೂರು ನೀಡಿದ್ದು, ಮಂಗಳವಾರ ಮಧ್ಯಾಹ್ನ ವೇಳೆ ಧರ್ಮಸ್ಥಳ ಡಿಪೆÇ್ಪದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕೆಎ21 ಎಫ್0103 ನೋಂದಣಿ ಸಂಖ್ಯೆಯ ಸರಕಾರಿ ಬಸ್ಸು ಧರ್ಮಸ್ಥಳ ಗ್ರಾಮದ ಪುದುವೆಟ್ಟು ಕ್ರಾಸ್ ಬಳಿ ತಲುಪಿದಾಗ, ಎದುರಿನಿಂದ ದ್ವಿಚಕ್ರ ವಾಹನ ಸವಾರಿ ಮಾಡಿಕೊಂಡು ಬಂದ ಸವಾರನೋರ್ವ ಬಸ್ಸಿನ ಮುಂಬಾಗದ ಗ್ಲಾಸಿಗೆ ಕಲ್ಲು ಹೊಡೆದು ಹೋಗಿರುತ್ತಾನೆ. ಕೃತ್ಯದಿಂದ ಸುಮಾರು 15 ಸಾವಿರ ರೂಪಾಯಿ ನಷ್ಟವುಂಟಾಗಿದೆ ಎಂದು ನೀಡಿದ ದೂರಿನಂತೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment