ಉಳ್ಳಾಲ, ಆಗಸ್ಟ್ 15, 2025 (ಕರಾವಳಿ ಟೈಮ್ಸ್) : ತೊಕ್ಕೊಟ್ಟು-ಬಬ್ಬುಕಟ್ಟೆ ಆಕ್ಸಿಜನ್ ಲ್ಯಾಂಡ್ ಮಾರ್ಕ್ ವಸತಿ ಸಮುಚ್ಚಯದ ವತಿಯಿಂದ ದೇಶದ 79ನೇ ಸ್ವಾತಂತ್ರ್ತೋತ್ಸವ ಶುಕ್ರವಾರ ಆಚರಿಸಲಾಯಿತು. ಸಮುಚ್ಚಯ ಆಡಳಿತ ಸಮಿತಿ ಅಧ್ಯಕ್ಷ ಸಿದ್ದೀಕ್ ಸ್ಕೈ ಧ್ವಜಾರೋಹಣಗೈದರು.
ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್ ಇದರ ಪೆÇ್ರಫೆಸರ್, ಎಚ್ ಒ ಡಿ ಶಶಿಕುಮಾರ್ ಸ್ವಾತಂತ್ರ್ತೋತ್ಸವ ಸಂದೇಶ ನೀಡಿದರು. ಸಾಮಾಜಿಕ ಕಾರ್ಯಕರ್ತರಾದ ಅಫ್ಝಲ್ ಪಿಲಾರ್, ಆಂಟಿಕ್ ಗೋಲ್ಡ್ ಮಾಲಕ ಆಸಿಫ್ ಮಾಳಿಗೆ, ಆಯಿಷಾ ತಹಾನಿ ಶುಭ ಹಾರೈಸಿದರು.
ರೆಹಮತ್ ಸಾಗರ್, ಇಬ್ರಾಹಿಂ ಸಾಜಿದ್, ನಾಸೀರ್ ಆಲ್ಫಾ, ಟಿ ಕೆ ಸಲೀಂ ಫರಂಗಿಪೇಟೆ, ಸಯ್ಯದ್ ಇಶಾಕ್, ಮೊಹಮ್ಮದ್ ಸಲೀಂ, ಆಸಿಫ್ ಮೊದಲಾದವರು ಭಾಗವಹಿಸಿದ್ದರು. ಮನ್ಸೂರ್ ಅಹ್ಮದ್ ಸಾಮಣಿಗೆ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment