ಕಡಬ, ಆಗಸ್ಟ್ 20, 2025 (ಕರಾವಳಿ ಟೈಮ್ಸ್) : ಗ್ರಾಮ ಪಂಚಾಯತ್ ಆಗಿದ್ದ ಕಡಬ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ ಬಳಿಕ ನಡೆದ ಪ್ರಥಮ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಬುಧವಾರ ನಡೆದ ಮತ ಎಣಿಕೆ ಬಳಿಕ ಫಲಿತಾಂಶ ಘೋಷಣೆಯಾಗಿದ್ದು, 13 ಸ್ಥಾನಗಳ ಪೈಕಿ 8 ಸ್ಥಾನ ಕಾಂಗ್ರೆಸ್ ಪಾಲಾದರೆ, 5 ಸ್ಥಾನಗಳು ಬಿಜೆಪಿ ಪಾಲಾದವು.
ಕಾಂಗ್ರೆಸ್ ಪಕ್ಷದಿಂದ ತಮನ್ನಾ ಜಬೀನ್, ಮುಹಮ್ಮದ್ ಪೈಜಲ್, ಸೈಮನ್ ಸಿ ಜೆ, ಮುಹಮ್ಮದ್ ಹನೀಫ್, ನೀಲಾವತಿ ಶಿವರಾಮ, ಪಿ ಜೆ ರೋಹಿತ್, ಕೃಷ್ಣಪ್ಪ ಪೂಜಾರಿ ಹಾಗೂ ಕೃಷ್ಣಪ್ಪ ನಾಯ್ಕ ಅವರು ಜಯಗಳಿಸಿದರೆ, ಬಿಜೆಪಿಯಿಂದ ಕುಸುಮ, ದಯಾನಂದ ಗೌಡ, ಗುಣವತಿ ದೊಡ್ಡಕೊಪ್ಲ, ಅಕ್ಷತಾ ಮಣಿಮುಂಡ, ಹಾಗೂ ಮೋಹನ್ ಅವರು ಜಯಭೇರಿ ಭಾರಿಸಿದ್ದಾರೆ. ಬೆಳಗ್ಗೆ 8 ಗಂಟೆಗೆ ಆರಂಭಗೊಂಡ ಮತ ಎಣಿಕೆ ಪ್ರಕ್ರಿಯೆ 9.45ರ ವೇಳೆಗೆ ಮುಕ್ತಾಯಗೊಂಡಿದೆ.
0 comments:
Post a Comment