ಬಂಟ್ವಾಳ, ಆಗಸ್ಟ್ 18, 2025 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭಾ ಮಾಜಿ ಸದಸ್ಯೆ, ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ನಿವಾಸಿ ಶ್ರೀಮತಿ ಚಂಚಲಾಕ್ಷಿ ಗಣೇಶ್ ಬಂಗೇರ ಅವರ ಪುತ್ರಿ ಚಿ ಸೌ ನಿಶಾ ಎಂಬ ವಧುವಿನ ವಿವಾಹವು ಮಂಗಳೂರು-ಜೆಪ್ಪಿನಮೊಗರು ನಿವಾಸಿ ಸಿ.ಎಚ್. ಮಾಧವ ಅವರ ಪುತ್ರ ಚಿ ಸಂದೀಪ್ ಸಿ.ಎಚ್. ಎಂಬ ವರನೊಂದಿಗೆ ಆಗಸ್ಟ್ 18 ರಂದು ಸೋಮವಾರ ಮಂಗಳೂರು-ಬೆಂದೂರ್ ಸೈಂಟ್ ಸೆಬಾಸ್ಟಿಯನ್ ಸೆಂಟೆನರಿ ಸಭಾಂಗಣದಲ್ಲಿ ನೆರವೇರಿತು.
ವಿವಾಹ ಸಮಾರಂಭದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ, ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ, ಮಾಜಿ ಉಪಾಧ್ಯಕ್ಷರುಗಳಾದ ಯಾಸ್ಮೀನ್ ಹಾಮದ್, ಜೆಸಿಂತಾ ಡಿ’ಸೋಜ, ಮಾಜಿ ಸದಸ್ಯೆ ಪ್ರಭಾ ಸಾಲ್ಯಾನ್ ಸಹಿತ ವಿವಿಧ ಗಣ್ಯರು, ಬಂಧು-ಮಿತ್ರರು ಭಾಗವಹಿಸಿ ನವ ವಧೂ-ವರರಿಗೆ ಶುಭ ಹಾರೈಸಿದರು.

















0 comments:
Post a Comment