ಕಬಕ : ದೇಶಭಕ್ತಿ ಹಾಡಿನಲ್ಲಿ ಜನಮನ್ನಣೆ ಗಳಿಸಿದ ಎಳೆ ವಿದ್ಯಾರ್ಥಿನಿ ಶೈಮಾಗೆ ಬಗ್ಗುಮೂಲೆ ಲೀಗಲ್ ಅಸೋಸಿಯೇಟ್ಸ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗೌರವ - Karavali Times ಕಬಕ : ದೇಶಭಕ್ತಿ ಹಾಡಿನಲ್ಲಿ ಜನಮನ್ನಣೆ ಗಳಿಸಿದ ಎಳೆ ವಿದ್ಯಾರ್ಥಿನಿ ಶೈಮಾಗೆ ಬಗ್ಗುಮೂಲೆ ಲೀಗಲ್ ಅಸೋಸಿಯೇಟ್ಸ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗೌರವ - Karavali Times

728x90

16 August 2025

ಕಬಕ : ದೇಶಭಕ್ತಿ ಹಾಡಿನಲ್ಲಿ ಜನಮನ್ನಣೆ ಗಳಿಸಿದ ಎಳೆ ವಿದ್ಯಾರ್ಥಿನಿ ಶೈಮಾಗೆ ಬಗ್ಗುಮೂಲೆ ಲೀಗಲ್ ಅಸೋಸಿಯೇಟ್ಸ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗೌರವ

ಬಂಟ್ವಾಳ, ಆಗಸ್ಟ್ 16, 2025 (ಕರಾವಳಿ ಟೈಮ್ಸ್) : ದೇಶಭಕ್ತಿ ಹಾಡುಗಾರಿಕೆಯಲ್ಲಿ ಗಮನ ಸೆಳೆದ ಕಬಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ 3ನೇ ತರಗತಿ  ವಿದ್ಯಾರ್ಥಿನಿ ಹಲೀಮತ್ ಶೈಮಾ ಅವರನ್ನು ಬಗ್ಗುಮೂಲೆ ಲೀಗಲ್ ಅಸೋಸಿಯೇಟ್ಸ್ ಹಾಗೂ ಎಜ್ಯುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶನಿವಾರ ಸನ್ಮಾನಿಸಿ ಗೌರವಿಸಲಾಯಿತು.

ಕಬಕ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಹಲೀಮತ್ ಶೈಮಾ ದೇಶಭಕ್ತಿ ಹಾಡು ಹಾಡುವ ಮೂಲಕ ಗಮನ ಸೆಳೆದಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಜನ ಪ್ರಶಂಸೆ ಹಾಗೂ ಮೆಚ್ಚುಗೆಗೆ ಪಾತ್ರವಾಗಿತ್ತು. 

ವಿದ್ಯಾರ್ಥಿನಿಯ ಪ್ರತಿಭೆಯನ್ನು ಗುರುತಿಸಿದ ಬಗ್ಗುಮೂಲೆ ಸಮೂಹ ಸಂಸ್ಥೆಯ ಪದಾಧಿಕಾರಿಗಳು ಗಣ್ಯ ಅತಿಥಿಗಳ ಜೊತೆಗೂಡಿ ವಿದ್ಯಾರ್ಥಿನಿಯ ನಿವಾಸಕ್ಕೆ ಭೇಟಿ ನೀಡಿ ಗೌರವಿಸಿದೆ. ಅಲ್ ಅಮೀನ್ ಚಾರಿಟಿ ಗ್ರೂಪ್  ಮೆನೇಜಿಂಗ್ ಡೈರೆಕ್ಟರ್ ಸಿದ್ದೀಕ್ ಸೂರ್ಯ ಅವರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ವಿದ್ಯಾರ್ಥಿನಿ ಹಲೀಮತ್ ಶೈಮಾ ಅವರನ್ನು ಸನ್ಮಾನಿಸಿ, ಗೌರವಿಸಿದರು. 

ಈ ಸಂದರ್ಭ ಮಾತನಾಡಿದ ಹೇಮನಾಥ ಶೆಟ್ಟಿ ಅವರು, ಹೆಸರಿಗೆ, ಪ್ರತಿಷ್ಠೆಗಾಗಿ ಹಣವಂತರನ್ನು, ಉದ್ಯಮಿಗಳನ್ನು ಸನ್ಮಾನಿಸಿ ಹೆಸರು ಗಳಿಸುವ ಇಂದಿನ ಕಾಲಘಟ್ಟದಲ್ಲಿ ಎಳೆಯ ಪ್ರತಿಭೆಯನ್ನು ಗುರುತಿಸಿ,  ಸನ್ಮಾನಿಸಿ ಗೌರವಿಸಿರುವ ಬಗ್ಗುಮೂಲೆ ಸಂಸ್ಥೆಯ ಕೆಲಸ ಅತ್ಯಂತ ಶ್ಲಾಘನೀಯ ಎಂದು ಕೊಂಡಾಡಿದರು.

ಈ ಸಂದರ್ಭ ಪ್ರಮುಖರಾದ ಡಾ ಬದ್ರುದ್ದೀನ್, ಮಧುರಾ ಇಬ್ರಾಹಿಂ ಬಗ್ಗುಮೂಲೆ, ಖಾದರ್ ಕನ್ಝ, ಸಾದಿಕ್ ಅಕ್ಕರೆ, ಸಿದ್ದೀಕ್ ಮಿತ್ತೂರು, ಕೆಜಿಎನ್ ಅಶ್ರಫ್ ಅಳಕೆಮಜಲು, ಖಾದರ್ ಭಾರತ್, ಅಶ್ರಫ್ ಭಾರತ್, ಶರೀಫ್ ಸ್ಟೈಲ್, ಶಬ್ಬೀರ್ ಅಳಕೆಮಜಲು, ಹಂಝತ್ ಸಾಲ್ಮರ, ಹಾರಿಸ್ ಕೋನಿಮಾರ್, ವಿದ್ಯಾರ್ಥಿನಿ ಹಲೀಮತ್ ಅವರ ಹೆತ್ತವರಾದ ಝುಬೈರ್ ಭಾರತ್, ಸಲ್ಮಾ ಝುಬೈರ್ ಮೊದಲಾದವರು ಉಪಸ್ಥಿತರಿದ್ದರು.

ಬಗ್ಗುಮೂಲೆ ಲೀಗಲ್ ಅಸೋಸಿಯೇಟ್ಸ್ ಹಾಗೂ ಎಜ್ಯುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ ಮೆನೇಜಿಂಗ್ ಡೈರೆಕ್ಟರ್ ಹನೀಫ್ ಬಗ್ಗುಮೂಲೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಕಬಕ : ದೇಶಭಕ್ತಿ ಹಾಡಿನಲ್ಲಿ ಜನಮನ್ನಣೆ ಗಳಿಸಿದ ಎಳೆ ವಿದ್ಯಾರ್ಥಿನಿ ಶೈಮಾಗೆ ಬಗ್ಗುಮೂಲೆ ಲೀಗಲ್ ಅಸೋಸಿಯೇಟ್ಸ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗೌರವ Rating: 5 Reviewed By: karavali Times
Scroll to Top