ಬಂಟ್ವಾಳ, ಆಗಸ್ಟ್ 11, 2025 (ಕರಾವಳಿ ಟೈಮ್ಸ್) : ತಾಲೂಕಿನ ಪುದು ಗ್ರಾಮದ ಮಾರಿಪಳ್ಳ ಸಮೀಪದ ಪಾಡಿ ಎಂಬಲ್ಲಿ ಅಕ್ರಮ ಗೋವಧೆ ಮಾಡುತ್ತಿದ್ದ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭಾನುವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಇಲ್ಲಿನ ನಿವಾಸಿ ಹನಸಬ್ಬ ಎಂಬವರ ಮನೆ ಬಳಿ ದನವನ್ನು ಎಲ್ಲಿಂದಲೋ ಪರವಾನಿಗೆ ಇಲ್ಲದೆ ಸಾಗಾಟ ಮಾಡಿಕೊಂಡು ಬಂದು ವಧೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಸೈ ಮಂಜುನಾಥ ಟಿ ಅವರ ನೇತೃತ್ವದ ಪೊಲೀಸರು ಈ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಆರೋಪಿಗಳು ವಧಾ ಕೃತ್ಯಕ್ಕೆ ಬಳಸುತ್ತಿದ್ದ ವಸ್ತುಗಳನ್ನು ಸ್ಥಳದಲ್ಲೇ ಬಿಟ್ಟು ಹಿಂಬದಿಯ ಸಂಧಿಯ ಮೂಲಕ ಪರಾರಿಯಾಗಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಜಾನುವಾರು ವಧೆ ಮಾಡುವ ಸಲಕರಣೆಗಳು ಪತ್ತೆಯಾಗಿದೆ. ವಧೆ ಮಾಡಿದ ಹಸುವಿನ ಮೌಲ್ಯ 15 ಸಾವಿರ ರೂಪಾಯಿಗಳು ಹಾಗೂ ಇತರ ಸಾಮಾಗ್ರಿಗಳ ಮೌಲ್ಯ 750/- ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment