ಮಂಗಳೂರು, ಸೆಪ್ಟೆಂಬರ್ 01, 2025 (ಕರಾವಳಿ ಟೈಮ್ಸ್) : ಬಾಡಿಗೆ ಮನೆಯಲ್ಲಿ ನಡೆಯುತ್ತಿದ್ದ ಅಕ್ರಮ ಮದ್ಯ ತಯಾರಿಕಾ ಕೇಂದ್ರಕ್ಕೆ ಕೊಣಾಜೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಉಳ್ಳಾಲ ತಾಲೂಕಿನ ಫಜೀರು ಗ್ರಾಮದ ಕಂಬಳಪದವು ಎಂಬಲ್ಲಿ ಭಾನುವಾರ ನಡೆದಿದೆ.
ಬಂಧಿತ ಆರೋಪಿಗಳನ್ನು ಪ್ರಣವ್ ಪಿ ಶೆಣೈ (24) ಹಾಗೂ ಅನೂಷ್ ಆರ್ (24) ಎಂದು ಹೆಸರಿಸಲಾಗಿದೆ. ಬಂಧಿತರಿಂದ ಸುಮಾರು 1,15,110/- ರೂಪಾಯಿ ಮೌಲ್ಯದ ಆಕ್ರಮ ಮದ್ಯ ಮತ್ತು ತಯಾರಿಕಾ ಯಂತ್ರೋಪಕರಣಗಳು, ಮದ್ಯ ಬಾಟ್ಲಿಗಳು ಮತ್ತು ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕೆ ಪರವಾನಗಿ ಇರುವ ಮ್ಯಾನ್ಶನ್ ಹೌಸ್ ಬಾಟ್ಲಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕೊಣಾಜೆ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 104/2025, ಕಲಂ 123 ಆರ್/ಡಬ್ಲ್ಯು 3(5) ಬಿ ಎನ್ ಎಸ್-2023 ಹಾಗೂ ಕಲಂ 13, 32, 34 ಕೆಇ ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯು ಮಂಗಳೂರು ನಗರ ಉಪ ಪೊಲೀಸ್ ಆಯುಕ್ತ (ಕಾನೂನು ಸುವ್ಯವಸ್ಥೆ) ಮಿಥುನ್ ಹಾಗೂ ಉಪ ಪೊಲೀಸ್ ಆಯುಕ್ತ (ಅಪರಾಧ) ರವಿಶಂಕರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಕೊಣಾಜೆ ಠಾಣಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
0 comments:
Post a Comment