![]() |
ನಾಗರಾಜ್ ಕೆ ಎಲ್ (ನೂತನ ಅಧ್ಯಕ್ಷ) |
![]() |
ಯಾದವ ಕುಲಾಲ್ ಅಗ್ರಬೈಲು (ನೂತನ ಪ್ರಧಾನ ಕಾರ್ಯದರ್ಶಿ) |
ಬಂಟ್ವಾಳ, ಸೆಪ್ಟೆಂಬರ್ 08, 2025 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಪ್ರಿಂಟರ್ಸ್ ಎಸೋಸಿಯೇಶನ್ ಇದರ ನೂತನ ಅಧ್ಯಕ್ಷರಾಗಿ ನಾಗರಾಜ್ ಕೆ ಎಲ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಯಾದವ ಕುಲಾಲ್ ಅಗ್ರಬೈಲು ಅವರು ಆಯ್ಕೆಯಾಗಿದ್ದಾರೆ.
ಭಾನುವಾರ ಬಿ ಸಿ ರೋಡಿನ ಸತ್ಯನಾರಾಯಣ ಲಂಚ್ ಹೋಂ ಹೊಟೇಲಿನಲ್ಲಿ ನಿಕಟಪೂರ್ವಾಧ್ಯಕ್ಷ ಈಶ್ವರ ಕುಮಾರ್ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಎಸೋಸಿಯೇಶನ್ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ.
ಉಪಾಧ್ಯಕ್ಷರುಗಳಾಗಿ ಕೆ ರಘುವೀರ್ ಕಾಮತ್, ಪಿ ಮಂಜಪ್ಪ, ಕೋಶಾಧಿಕಾರಿಯಾಗಿ ಲಾವಣ್ಯ ಸುರೇಶ್ ಜ್ಯೋತಿಗುಡ್ಡೆ, ಜೊತೆ ಕಾರ್ಯದರ್ಶಿಗಳಾಗಿ ಮಿಥುನ್ ಎ ಎಸ್, ದಿನೇಶ್ ತುಂಬೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಈಶ್ವರ ಕುಮಾರ್ ಭಟ್, ಸಚ್ಚಿದಾನಂದ ಪ್ರಭು, ರಮೇಶ್, ಮುಸ್ತಾಫ, ವೆಂಕಟ್ರಮಣ ಕಲ್ಲಡ್ಕ, ಮಾಧವ ಧರಿಬಾಗಿಲು ಅವರು ಆಯ್ಕೆಯಾಗಿದ್ದಾರೆ.
ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಚ್ ಕುದ್ಯಾಡಿ ಸ್ವಾಗತಿಸಿ, ಮಿಥುನ್ ಮೊಗರ್ನಾಡು ಪ್ರಾರ್ಥಿಸಿದರು. ಕೋಶಾಧಿಕಾರಿ ಯಾದವ ಅಗ್ರಬೈಲು ಲೆಕ್ಕಪತ್ರ ಮಂಡಿಸಿದರು.
0 comments:
Post a Comment