ಮಂಗಳೂರು, ಸೆಪ್ಟೆಂಬರ್ 17, 2025 (ಕರಾವಳಿ ಟೈಮ್ಸ್) : ಅಡ್ಯಾರ್ ಗ್ರಾಮದ ತಜಿಪೋಡಿ ಎಂಬಲ್ಲಿ ಸೆ 13 ರಂದು ಮನೆಯಂಗಳದಿಂದ ಹಸು ಕಳ್ಳತನ ಪ್ರಕರಣ ಬೇಧಿಸಿದ ಕಂಕನಾಡಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಲ್ಲದೆ ಕಳವಾಗಿರುವ ಹಸುವನ್ನು ಜೀವಂತವಾಗಿ ರಕ್ಷಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅಡ್ಯಾರ್-ಕಣ್ಣೂರು ಗಾಣದಬೆಟ್ಟು ನಿವಾಸಿ ಮೊಹಮ್ಮದ್ ನೌಷಾದ್ ಎಂಬವರ ಪುತ್ರ ಶಾಬಾಜ್ ಅಹಮ್ಮದ್, ವಳಚ್ಚಿಲ್ ಸಮೀಪದ ಅರ್ಕುಳ ಯಶಸ್ವಿ ಹಾಲ್ ಬಳಿ ನಿವಾಸಿ ಸುಲೈಮಾನ್ ಅವರ ಪುತ್ರ ಮೊಹಮ್ಮದ್ ಸುಹಾನ್ ಹಾಗೂ ಅಡ್ಯಾರ್ ಜುಮಾ ಮಸೀದಿ ಬಳಿ ನಿವಾಸಿ ಅಬ್ದುಲ್ ಖಾದರ್ ಅವರ ಪುತ್ರ ವಳಚ್ಚಿಲ್ ಖಾದರ್ ಮೊಹಮ್ಮದ್ ಅಲಿಯಾಸ್ ಕೋಳಿ ಮೋನಕ್ಕ ಎಂದು ಹೆಸರಿಸಲಾಗಿದೆ.
ಸೆಪ್ಟೆಂಬರ್ 13 ರಂದು ಬೆಳಗಿನ ಜಾವ ಅಡ್ಯಾರ್ ಗ್ರಾಮದ ತಜಿಪೆÇೀಡಿ ನಿವಾಸಿ ಉಮೇಶ್ ಆಳ್ವ ಎಂಬವರ ಮನೆಯಂಗಳದಿಂದ ಒಂದು ಕ್ರಾಸ್ ಜರ್ಸಿ ಹಸುವನ್ನು ಕಳ್ಳತನ ಮಾಡಿದ ಬಗ್ಗೆ ಕಂಕನಾಡಿ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಕೈಗೆತ್ತಿಕೊಂಡು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಕಳವಾದ ಹಸುವನ್ನು ಜೀವಂತವಾಗಿ ಪತ್ತೆ ಮಾಡಿ ರಕ್ಷಿಸಿದ್ದಾರೆ.
ಆರೋಪಿಗಳಾದ ಶಾಬಾಜ್ ಕಣ್ಣೂರು ಮತ್ತು ಸುಹಾನ್ ವಳಚ್ಚಿಲ್ ದನ ಕಳ್ಳತನ ಮಾಡಿ, ವಳಚ್ಚಿಲ್ ಖಾದರ್ ನಿಗೆ ಮಾರಾಟ ಮಾಡಿದ್ದಾರೆ. ಆತನು ಅದನ್ನು ಮಾಂಸ ಮಾಡಲು ಖರೀದಿಸಿದ್ದಾನೆ.
ಶಾಬಾಜ್ ಕಣ್ಣೂರು ಎಂಬಾತನ ವಿರುದ್ದ ಈಗಾಗಲೇ ಮಂಗಳೂರು ಗ್ರಾಮಾಂತರ ಮತ್ತು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ, ಎರಡು ಕೊಲೆ ಪ್ರಯತ್ನ ಮತ್ತು ಒಂದು ದೊಂಬಿ ಪ್ರಕರಣಗಳು ಮತ್ತು ಮೊಹಮ್ಮದ್ ಸುಹಾನ್ ಅರ್ಕುಳ ಎಂಬಾತನ ವಿರುದ್ದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಒಂದು ಎನ್.ಡಿ.ಪಿ.ಎಸ್ ಕಾಯ್ದೆ ಪ್ರಕರಣ ಹಾಗೂ ವಳಚ್ಚಿಲ್ ಖಾದರ್ ಮೊಹಮ್ಮದ್ ಅಲಿಯಾಸ್ ಕೋಳಿ ಮಹಮದ್ ಅಡ್ಯಾರ್ ಎಂಬಾತನ ವಿರುದ್ದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2024ರಲ್ಲಿ ಒಂದು ಗೋ ಹತ್ಯೆ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳು ದನ ಕಳ್ಳತನ ಮಾಡಿ ಅದನ್ನು ವಳಚಿಲ್ ಅಬ್ದುಲ್ ಖಾದರ್ ಮನೆಗೆ ಹೊಂದಿಕೊಂಡ ಶೆಡ್ ನಲ್ಲಿ ಹತ್ಯೆ ಮಾಡಿ ಮಾಂಸ ಮಾಡಲು ಸಿದ್ಧತೆ ಮಾಡಿಕೊಂಡ ಹಿನ್ನಲೆಯಲ್ಲಿ ಸದ್ರಿ ಜಾಗಕ್ಕೆ ದಾಳಿ ನಡೆಸಿದ ಪೊಲೀಸರು ಹಸುವನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
0 comments:
Post a Comment