ಬಂಟ್ವಾಳ, ಸೆಪ್ಟೆಂಬರ್ 18, 2025 (ಕರಾವಳಿ ಟೈಮ್ಸ್) : ಹದಿನೆಂಟು ವರ್ಷದ ಒಳಗಿನ ಅಪ್ರಾಪ್ತರು ಯಾವುದೇ ರೀತಿಯ ಮಾದಕ ದ್ರವ್ಯ ಸೇವನೆ, ಸೈಬರ್ ಅಪರಾಧಗಳಲ್ಲಿ ತೊಡಗುವುದು ಒಳ್ಳೆಯದಲ್ಲ. ಇದರಿಂದ ಮುಂದಕ್ಕೆ ಸ್ವಾಸ್ಥ್ಯ ಸಮಾಜವನ್ನು ಕಾಣಲು ಸಾಧ್ಯವಿಲ್ಲ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೆÇೀಲಿಸ್ ಇನ್ಸ್ ಪೆಕ್ಟರ್ ಬಿ ಶಿವಕುಮಾರ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪೆÇೀಲಿಸ್ ಇಲಾಖೆ, ಬಂಟ್ವಾಳ ಉಪ ವಿಭಾಗ ಮತ್ತು ಬಂಟ್ವಾಳ ಗ್ರಾಮಾಂತರ ಪೆÇೀಲಿಸ್ ಠಾಣಾ ವತಿಯಿಂದ ತುಂಬೆ ಕಾಲೇಜಿನಲ್ಲಿ ಗುರುವಾರ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮಾದಕ ವ್ಯಸನ ಮತ್ತು ಸೈಬರ್ ಕ್ರೈಮ್ ಬಗ್ಗೆ ಕಾರ್ಯಾಗಾರದಲ್ಲಿ ಮಾಹಿತಿ ನೀಡಿ ಅವರು ಮಾತನಾಡಿದರು.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಸೈ ಮಂಜುನಾಥ್ ಟಿ ಮಾತನಾಡಿ, ಅಪ್ರಾಪ್ತ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ವಾಹನ ಚಲಾಯಿಸುವುದು, ಹೆಲ್ಮೆಟ್ ಧರಿಸದಿರುವುದು, ಟ್ರಿಪಲ್ಸ್ ರೈಡಿಂಗ್ ಮಾಡುವುದು ಅಪರಾಧವಾಗುತ್ತದೆ. ಅಫೀಮು, ಕೊಕೇನ್, ಗಾಂಜಾ ಮೊದಲಾದ ಮಾದಕ ವ್ಯಸನ ಅಥವಾ ಸರಬರಾಜು ಕೃತ್ಯದಲ್ಲಿ ಭಾಗಿಯಾಗುವುದೂ ತಪ್ಪು ಎಂದರಲ್ಲದೆ ಸೈಬರ್ ಅಪರಾಧ, ಪೆÇೀಕ್ಸೋ ಕಾಯಿದೆ ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಠಾಣಾ ಎಚ್ ಸಿಗಳಾದ ಕೃಷ್ಣ ನಾಯ್ಕ್, ಕೀರ್ತನ್, ಕಾಲೇಜು ಕಚೇರಿ ಅಧೀಕ್ಷಕ ಅಬ್ದುಲ್ ಕಬೀರ್, ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಂ ಜೆ ನಾಯಕ್ ಕೆ ಭಾಗವಹಿಸಿದ್ದರು. ಕಾಲೇಜು ಪ್ರಾಂಶುಪಾಲ ವಿ ಎಸ್ ಭಟ್ ಸ್ವಾಗತಿಸಿ, ಉಪನ್ಯಾಸಕ ದಿನೇಶ ಶೆಟ್ಟಿ ಅಳಿಕೆ ವಂದಿಸಿದರು.
0 comments:
Post a Comment