ಮಂಗಳೂರು, ಸೆಪ್ಟೆಂಬರ್ 18, 2025 (ಕರಾವಳಿ ಟೈಮ್ಸ್) : ಡಿಜಿಇಟಿ ನವದೆಹಲಿಯವರು 2025ನೇ ಶೈಕ್ಷಣಿಕ ಸಾಲಿನಲ್ಲಿ ಸರಕಾರಿ ಐಟಿಐಗಳಲ್ಲಿ ಪ್ರವೇಶ ಪಡೆಯಲು ಸೆಪ್ಟೆಂಬರ್ 30ರವರೆಗೆ ಅವಕಾಶ ನೀಡಿದ್ದು, ಮಂಗಳೂರು ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2025-26ನೇ ಸಾಲಿನ ವಿವಿಧ ಕೋರ್ಸುಗಳಲ್ಲಿ ಬಾಕಿ ಉಳಿದಿರುವ ಸೀಟುಗಳಿಗೆ ಪ್ರವೇಶ ಬಯಸುವ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಖುದ್ದಾಗಿ ಸಂಸ್ಥೆಗೆ ಭೇಟಿ ನೀಡಿ ಪ್ರವೇಶ ಪಡೆಯಬಹುದು.
ಬಾಕಿ ಉಳಿದಿರುವ ಸೀಟುಗಳ ವಿವರ : ಕಂಪ್ಯೂಟರ್ ಆಪರೇಷನ್ ಆಂಡ್ ಪೆÇ್ರೀಗ್ರಾಮಿಂಗ್ ಅಸಿಸ್ಟಂಟ್ (14 ಸೀಟುಗಳು ಬಾಕಿ), ಎಲೆಕ್ಟ್ರಾನಿಕ್ ಮೆಕ್ಯಾನಿಕ್ (26 ಸೀಟುಗಳು ಬಾಕಿ), ಇಲೆಕ್ಟ್ರಿಷಿಯನ್ (7 ಸೀಟುಗಳು ಬಾಕಿ), ಸಿ.ಎನ್.ಸಿ ಮೆಷಿನಿಂಗ್ ಟೆಕ್ನಿಷಿಯನ್ (24 ಸೀಟುಗಳು ಬಾಕಿ), ವರ್ಚುವಲ್ ಅನಾಲಿಸಿಸ್ ಆಂಡ್ ಡಿಸೈನರ್ ಎಫ್.ಇ.ಎಮ್ (24 ಸೀಟುಗಳು ಬಾಕಿ), ಇಂಡಸ್ಟ್ರಿಯಲ್ ರೋಬೋಟಿಕ್ಸ್ ಆಂಡ್ ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಿಷಿಯನ್ (20 ಸೀಟುಗಳು ಬಾಕಿ), ಮ್ಯಾನುಫ್ಯಾಕ್ಚರಿಂಗ್ ಪೆÇ್ರಸೆಸ್ ಕಂಟ್ರೋಲ್ ಆಂಡ್ ಅಟೊಮೇಷನ್ (20 ಸೀಟುಗಳು ಬಾಕಿ), ಇಂಜಿನಿಯರಿಂಗ್ ಡಿಸೈನ್ ಟೆಕ್ನಿಷಿಯನ್ (10 ಸೀಟುಗಳು ಬಾಕಿ).
ಹೆಚ್ಚಿನ ವಿವರಗಳಿಗೆ ಸಂಸ್ಥೆಯನ್ನು ಅಥವಾ ದೂರವಾಣಿ ಸಂಖ್ಯೆ 9880119147, 9448858417, 9620766870 ಸಂಪರ್ಕಿಸಬಹುದು ಎಂದು ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment