ಅ. 2 ರಂದು ಕುದ್ರೋಳಿ ದಸರಾ ಮೆರವಣಿಗೆ : ಮಂಗಳೂರು ಪೊಲೀಸರಿಂದ ವಾಹನ ಸವಾರರಿಗೆ ಮಾರ್ಗ ಬದಲಾವಣೆ ಹಾಗೂ ಸಂಚಾರಿ ಸಲಹೆ - Karavali Times ಅ. 2 ರಂದು ಕುದ್ರೋಳಿ ದಸರಾ ಮೆರವಣಿಗೆ : ಮಂಗಳೂರು ಪೊಲೀಸರಿಂದ ವಾಹನ ಸವಾರರಿಗೆ ಮಾರ್ಗ ಬದಲಾವಣೆ ಹಾಗೂ ಸಂಚಾರಿ ಸಲಹೆ - Karavali Times

728x90

30 September 2025

ಅ. 2 ರಂದು ಕುದ್ರೋಳಿ ದಸರಾ ಮೆರವಣಿಗೆ : ಮಂಗಳೂರು ಪೊಲೀಸರಿಂದ ವಾಹನ ಸವಾರರಿಗೆ ಮಾರ್ಗ ಬದಲಾವಣೆ ಹಾಗೂ ಸಂಚಾರಿ ಸಲಹೆ

ಮಂಗಳೂರು, ಸೆಪ್ಟೆಂಬರ್ 30, 2025 (ಕರಾವಳಿ ಟೈಮ್ಸ್) : ಮಂಗಳೂರು ದಸರಾ ಪ್ರಯುಕ್ತ ಅಕ್ಟೋಬರ್ 2 ರಂದು ಸಂಜೆ 4 ಗಂಟೆಯಿಂದ ಮರುದಿನ ಮುಂಜಾನೆ 6 ಗಂಟೆಯ ವರೆಗೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ದೇವರ ಮೆರವಣೆಗೆ ಮತ್ತು ಟ್ಯಾಬ್ಲೋಗಳು ಕುದ್ರೋಳಿ ದೇವಸ್ಥಾನದ ದ್ವಾರ-ದುರ್ಗಾಮಹಲ್ ಜಂಕ್ಷನ್-ಮಣ್ಣಗುಡ್ಡೆ ಜಂಕ್ಷನ್-ನಾರಾಯಣಗುರು ವೃತ್ತ-ಲಾಲ್‍ಭಾಗ್-ಬಳ್ಳಾಲ್ ಭಾಗ್-ಕೊಡಿಯಲ್ ಗುತ್ತು ಜಂಕ್ಷನ್-ಬಿ.ಜಿ.ಸ್ಕೂಲ್ ಜಂಕ್ಷನ್-ಪಿ.ವಿ.ಎಸ್. ಜಂಕ್ಷನ್-ನವಭಾರತ್ ವೃತ್ತ-ನವಭಾರತ ವೃತ್ತ-ಬಿಷಪ್ ಹೌಸ್-ಸಿಟಿ ಸೆಂಟರ್-ಹಂಪನಕಟ್ಟೆ-ಕೆ ಬಿ ಕಟ್ಟೆ-ಸಾಫ್ರಾನ್ ಹೊಟೇಲ್-ಟೆಂಪಲ್ ಸ್ಕ್ವೆರ್-ಕಾರ್ ಸ್ಟ್ರೀಟ್-ಬಾಲಾಜಿ ಜಂಕ್ಷನ್-ನ್ಯೂಚಿತ್ರಾ ಜಂಕ್ಷನ್-ಅಳಕೆ ಬ್ರಿಡ್ಜ್-ಕುದ್ರೋಳಿ ದ್ವಾರದ ಮೂಲಕ ದೇವಸ್ಥಾನಕ್ಕೆ ಸಂಚರಿಸಲಿರುತ್ತದೆ. 

ಸದರಿ ದಿವಸ ಮಧ್ಯಾಹ್ನ 2 ಗಂಟೆಯಿಂದ ನಗರದ ರಸ್ತೆಗಳಲ್ಲಿ ವಾಹನ ದಟ್ಟಣೆಯಿಂದ ಸಂಚಾರಕ್ಕೆ ಅಡಚಣೆ ಉಂಟಾಗುವುದಲ್ಲದೇ, ಸಾರ್ವಜನಿಕರಿಗೆ ಸುರಕ್ಷತೆಗಾಗಿ ಸಾರ್ವಜನಿಕರು ಸದ್ರಿ ಮಾರ್ಗವನ್ನು ಉಪಯೋಗಿಸದೇ ಪರ್ಯಾಯ ಮಾರ್ಗಗಳನ್ನು ಅನುಸರಿಸಲು ಮತ್ತು ಮೆರವಣಿಗೆ ಸಾಗುವ ಸದರಿ ರಸ್ತೆಯ ಬದಿಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡದಂತೆ ತಿಳಿಸಲಾಗಿದೆ. 


ಕುದ್ರೋಳಿ ದಸರಾ ಮೆರವಣಿಗೆಯ ಮಾರ್ಗಗಳ ವಿವರ :


ಕುದ್ರೋಳಿ ದೇವಸ್ಥಾನದ ದ್ವಾರ-ದುರ್ಗಾಮಹಲ್ ಜಂಕ್ಷನ್-ಮಣ್ಣಗುಡ್ಡೆ ಜಂಕ್ಷನ್-ನಾರಾಯಣಗುರು ವೃತ್ತ-ಲಾಲ್‍ಭಾಗ್-ಬಳ್ಳಾಲ್ ಭಾಗ್-ಕೊಡಿಯಲ್ ಗುತ್ತು ಜಂಕ್ಷನ್-ಬಿ.ಜಿ. ಸ್ಕೂಲ್ ಜಂಕ್ಷನ್-ಪಿ.ವಿ.ಎಸ್. ಜಂಕ್ಷನ್-ನವಭಾರತ್ ವೃತ್ತ-ಕೆ ಎಸ್ ಆರ್ ರಸ್ತೆ-ಹಂಪನಕಟ್ಟೆ-ಕೆ.ಬಿ. ಕಟ್ಟೆ-ಫೆಲೀಕ್ಸ್ ಪೈ ರಸ್ತೆ-ಕಾರ್ ಸ್ಟ್ರೀಟ್-ಬಾಲಾಜಿ ಜಂಕ್ಷನ್-ನ್ಯೂಚಿತ್ರಾ ಜಂಕ್ಷನ್-ಅಳಕೆ ಬ್ರಿಡ್ಜ್-ಕುದ್ರೋಳಿ ದೇವಸ್ಥಾನದ ದ್ವಾರವರೆಗೆ ವಾಹನ ದಟ್ಟಣೆಯಾಗುವ ಸಾದ್ಯೆತೆಗಳು ಇರುವುದರಿಂದ ಪರ್ಯಾಯ ಮಾರ್ಗಗಳನ್ನು ಬಳಸಲು ಸೂಚಿಸಲಾಗಿದೆ.


ಕುದ್ರೋಳಿ ದಸರಾ ಮೆರವಣಿಗೆಯ ಸಮಯ ವಾಹನ ಸಂಚಾರದ ಮಾರ್ಪಾಡಿನ ವಿವರ : 


ಕೊಟ್ಟಾರ ಚೌಕಿ ಜಂಕ್ಷನ್ನಿಂದ ಲೇಡಿಹಿಲ್ ಮುಖಾಂತರ ಮಂಗಳೂರು ನಗರಕ್ಕೆ ಬರುವ ಎಲ್ಲಾ ತರಹದ ವಾಹನಗಳು ಬದಲಿ ಮಾರ್ಗವಾದ ಕುಂಟಿಕಾನ- ಕೆಪಿಟಿ-ನಂತೂರು ಮುಖೇನ ಮಂಗಳೂರು ನಗರಕ್ಕೆ ಸಂಚರಿಸುವುದು.

ಬಂಟ್ಸ್ ಹಾಸ್ಟೆಲಿನಿಂದ ಪಿವಿಎಸ್ ಮುಖಾಂತರ ಎಂ.ಜಿ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ವಾಹನಗಳು ಬಂಟ್ಸ್ ಹಾಸ್ಟೆಲ್-ಭಾರತ್ ಬೀಡಿ-ಬಟ್ಟಗುಡ್ಡ-ಕೆಪಿಟಿ ಮುಖೇನ ಅಥವಾ ಬಂಟ್ಸ್ ಹಾಸ್ಟೆಲ್-ಭಾರತ್ ಬೀಡಿ-ಮಲ್ಲಿಕಟ್ಟೆ ಮಾರ್ಗವಾಗಿ ಸಂಚರಿಸುವುದು.

ಕೆ.ಎಸ್.ಆರ್.ಟಿ.ಸಿ ಜಂಕ್ಷನ್ನಿನಿಂದ ಲಾಲ್ ಬಾಗ್ ಕಡೆಗೆ ಬರುವ ವಾಹನಗಳು ಕೆ.ಎಸ್.ಆರ್.ಟಿ.ಸಿ ಜಂಕ್ಷನ್-ಕಾಪಿಕಾಡ್-ಕುಂಟಿಕಾನ ಮೂಲಕ ಅಥವಾ ಕೆ.ಎಸ್.ಆರ್.ಟಿ.ಸಿ ಜಂಕ್ಷನ್-ಬಿಜೈ ಬಟ್ಟಗುಡ್ಡ ಮಾರ್ಗವಾಗಿ ಸಂಚರಿಸುವುದು.

ಎಲ್ಲಾ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಕೆ.ಎಸ್.ಆರ್.ಟಿ.ಸಿ ಜಂಕ್ಷನಿನಿಂದ-ಕಾಪಿಕಾಡ್-ಕುಂಟಿಕಾನ ಮೂಲಕ ಅಥವಾ ಬಿಜೈ ಬಟ್ಟಗುಡ್ಡ ಮೂಲಕ ಸಂಚರಿಸುವುದು.

ಹಂಪನಕಟ್ಟೆ ಕಡೆಯಿಂದ ಕೆ.ಎಸ್.ಆರ್-ನವಭಾರತ್ ವೃತ್ತದ ಮೂಲಕ ಪಿವಿಎಸ್ ಜಂಕ್ಷನ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಹಂಪನಕಟ್ಟೆ-ಎಲ್.ಹೆಚ್.ಹೆಚ್-ಅಂಬೇಡ್ಕರ್ ಜಂಕ್ಷನ್ ಮೂಲಕ ಸಂಚರಿಸುವುದು.


ನ್ಯೂ ಚಿತ್ರಾ ಜಂಕ್ಷನ್ನಿನಿಂದ ನವಭಾರತ ಕಡೆಗೆ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸುವುದು.

ಲೇಡಿಹಿಲ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಮಣ್ಣಗುಡ್ಡೆ ಜಂಕ್ಷನ್-ದುರ್ಗಾಮಹಲ್-ಕುದ್ರೋಳಿ ದೇವಸ್ಥಾನ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸುವುದು.


ಮಂಗಳೂರು ದಸರಾ ಮೆರವಣಿಗೆ ನೋಡಲು ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಈ ಕೆಳಕಂಡಂತೆ ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡುವುದು.


ಕರಾವಳಿ ಮೈದಾನ ಪಾರ್ಕಿಂಗ್

ಅಳಕೆ ಮಾರ್ಕೆಟ್ ಪಾರ್ಕಿಂಗ್ 

ಉರ್ವ ಮಾರ್ಕೆಟ್ ಮೈದಾನ  

ಉರ್ವ ಕೆನರಾ ಸ್ಕೂಲ್ ಪಾರ್ಕಿಂಗ್ 

ಕೆನರಾ ಡೊಂಗರಕೇರಿ ಸ್ಕೂಲ್ ಪಾರ್ಕಿಂಗ್

ಪೆÇಂಪೈ ಚರ್ಚ್ ಪಾರ್ಕಿಂಗ್ 

ದುರ್ಗಾಮಹಲ್ ಹೊಟೇಲ್ ಪಾರ್ಕಿಂಗ್

ಕುದ್ರೋಳಿ ನಾರಾಯಣ ಕಾಲೇಜು ಪಾರ್ಕಿಂಗ್ 

ಬಿ ಇ ಎಂ ಸ್ಕೂಲ್ ಪಾರ್ಕಿಂಗ್ 

ಸರಕಾರಿ ಹೆಣ್ಣುಮಕ್ಕಳ ಪ್ರೌಢ ಶಾಲೆ ಕಾರ್ ಸ್ಟ್ರೀಟ್

ಹೊಟೇಲ್ ವಿಮಲೇಶ್ ಪಾರ್ಕಿಂಗ್


ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವ ಮೂಲಕ ಸಂಚಾರ ನಿಯಮಗಳನ್ನು ಪಾಲಿಸಿ, ಸುರಕ್ಷಿತರಾಗಿರುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.



  • Blogger Comments
  • Facebook Comments

0 comments:

Post a Comment

Item Reviewed: ಅ. 2 ರಂದು ಕುದ್ರೋಳಿ ದಸರಾ ಮೆರವಣಿಗೆ : ಮಂಗಳೂರು ಪೊಲೀಸರಿಂದ ವಾಹನ ಸವಾರರಿಗೆ ಮಾರ್ಗ ಬದಲಾವಣೆ ಹಾಗೂ ಸಂಚಾರಿ ಸಲಹೆ Rating: 5 Reviewed By: karavali Times
Scroll to Top