ನಂದಾವರ, ಪಾಣೆಮಂಗಳೂರು ರಸ್ತೆಗಳಲ್ಲಿ ವಿಶೇಷ ಕಾರ್ಯಪಡೆಯ ಪೊಲೀಸರಿಂದ ಪಥ ಸಂಚಲನ - Karavali Times ನಂದಾವರ, ಪಾಣೆಮಂಗಳೂರು ರಸ್ತೆಗಳಲ್ಲಿ ವಿಶೇಷ ಕಾರ್ಯಪಡೆಯ ಪೊಲೀಸರಿಂದ ಪಥ ಸಂಚಲನ - Karavali Times

728x90

6 September 2025

ನಂದಾವರ, ಪಾಣೆಮಂಗಳೂರು ರಸ್ತೆಗಳಲ್ಲಿ ವಿಶೇಷ ಕಾರ್ಯಪಡೆಯ ಪೊಲೀಸರಿಂದ ಪಥ ಸಂಚಲನ

ಬಂಟ್ವಾಳ, ಸೆಪ್ಟೆಂಬರ್ 05, 2025 (ಕರಾವಳಿ ಟೈಮ್ಸ್) : ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಹಾಗೂ ಜನರಿಗೆ ಧೈರ್ಯ ತುಂಬುವ ಉದ್ದೇಶದಿಂದ ವಿಶೇಷ ಕಾರ್ಯಪಡೆ (ಎಸ್ ಎ ಎಫ್) ಪೊಲೀಸರು ನಂದಾವರದಿಂದ ಪಾಣೆಮಂಗಳೂರು ಮಾರ್ಗವಾಗಿ ಮುಖ್ಯ ರಸ್ತೆಗಳಲ್ಲಿ ಶನಿವಾರ ಸಂಜೆ ಪಥ ಸಂಚಲನ ನಡೆಸಿದರು. ಬಂಟ್ವಾಳ ನಗರ ಪೊಲೀಸ್ ಠಾಣಾ ಅಧಿಕಾರಿಗಳು ಹಾಗೂ ಬಂಟ್ವಾಳ ಸಂಚಾರಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನೇತೃತ್ವ ವಹಿಸಿದ್ದರು. 

ದಕ್ಷಿಣ ಕನ್ನಡ ಜಿಲ್ಲೆಯ ಕೋಮು ಸಂಘರ್ಷವನ್ನ ನಿಗ್ರಹಿಸುವ ನಿಟ್ಟಿನಲ್ಲಿ ವಿಶೇಷವಾಗಿ ಗಮನ ಹರಿಸಿದ ರಾಜ್ಯ ಸರಕಾರ ಇತ್ತೀಚೆಗೆ ವಿಶೇಷ ಕಾರ್ಯಪಡೆ (ಎಸ್ ಎ ಎಫ್) ಯನ್ನು ರಚಿಸಿತ್ತು.

  • Blogger Comments
  • Facebook Comments

0 comments:

Post a Comment

Item Reviewed: ನಂದಾವರ, ಪಾಣೆಮಂಗಳೂರು ರಸ್ತೆಗಳಲ್ಲಿ ವಿಶೇಷ ಕಾರ್ಯಪಡೆಯ ಪೊಲೀಸರಿಂದ ಪಥ ಸಂಚಲನ Rating: 5 Reviewed By: karavali Times
Scroll to Top