ಮಂಗಳೂರು, ಸೆಪ್ಟೆಂಬರ್ 05, 2025 (ಕರಾವಳಿ ಟೈಮ್ಸ್) : ಸುರತ್ಕಲ್ ಗ್ರಾಮದ ಮುಕ್ಕ ರೋಹನ್ ಎಸ್ಟೇಟ್ ಲೇಔಟಿನಿಂದ ಕಳೆದ ಜೂನ್ 24 ರಂದು ರಾತ್ರಿ 9 ಗಂಟೆ ಬಳಿಕ ಕಾಣೆಯಾಗಿ ಆಗಸ್ಟ್ 21 ರಂದು ಎಸ್ ಟಿ ಪಿ ಟ್ಯಾಂಕಿನೊಳಗೆ ಶವವಾಗಿ ಪತ್ತೆಯಾದ ವ್ಯಕ್ತಿಯ ಸಾವಿನ ಪ್ರಕರಣ ಬೇಧಿಸಿದ ಸುರತ್ಕಲ್ ಪೊಲೀಸರು ಇದೊಂದು ಕೊಲೆ ಪ್ರಕರಣ ಎಂಬುದನ್ನು ಖತಿಪಡಿಸಿ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಸಾವಿಗೀಡಾದ ವ್ಯಕ್ತಿಯನ್ನು ಪಶ್ಚಿಮ ಬಂಗಾಳ ಮೂಲದ ಮುಖೇಶ್ ಮಂಡಲ್ (27) ಎಂದು ಹೆಸರಿಸಲಾಗಿದ್ದು, ಬಂಧಿತ ಕೊಲೆ ಆರೋಪಿಯನ್ನು ಲಕ್ಷ್ಮಣ್ ಮಂಡಲ್ ಅಲಿಯಾಸ್ ಲಖನ್ ಎಂದು ಗುರುತಿಸಲಾಗಿದೆ.
ಮುಖೇಶ್ ಮಂಡಲ್ ಎಂಬಾತನು ಕಾಣೆಯಾದ ಬಗ್ಗೆ ಆತನ ಜೊತೆಯಲ್ಲಿ ಕೆಲಸ ಮಾಡಿಕೊಂಡಿದ್ದ ಪಶ್ಚಿಮ ಬಂಗಾಳದ ನಿವಾಸಿ ದೀಪಾಂಕರ್ ಎಂಬವರು ನೀಡಿದ ದೂರಿನಂತೆ ಜುಲೈ 2 ರಂದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 83/2025 ರಂತೆ ಮನುಷ್ಯ ಕಾಣೆ ಪ್ರಕರಣ ದಾಖಲಾಗಿತ್ತು.
ನಾಪತ್ತೆ ಪ್ರಕರಣ ಕೈಗೆತ್ತಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಆಗಸ್ಟ್ 21 ರಂದು ಬೆಳಿಗ್ಗೆ 10 ಗಂಟೆಗೆ ಸುರತ್ಕಲ್ ಗ್ರಾಮದ ಮುಕ್ಕ ರೋಹನ್ ಎಸ್ಟೇಟ್ ಲೇಔಟಿನೊಳಗೆ ಮುಖೇಶ್ ಮಂಡಲ್ ಮೃತ ದೇಹವು ಎಸ್ ಟಿ ಪಿ ಟ್ಯಾಂಕ್ ಒಳಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತ ಮುಖೇಶ್ ಮಂಡಲ್ ನನ್ನು ಲಕ್ಷ್ಮಣ್ ಮಂಡಲ್ ಅಲಿಯಾಸ್ ಲಖನ್ ಎಂಬತ ಕೊಲೆ ಮಾಡಿ ಎಸ್ ಟಿ ಪಿ ಟ್ಯಾಂಕಿಗೆ ಹಾಕಿ, ಟ್ಯಾಂಕಿನ ಮುಚ್ಚಳವನ್ನು ಪ್ಲೈವುಡ್ ಶೀಟ್ ಹಾಕಿ ಮುಚ್ಚಿ ಕೊಲೆಯನ್ನು ಮರೆ ಮಾಚಿರುವ ಬಗ್ಗೆ ಚೇತನ್ ಎಂಬವರು ನೀಡಿದ ದೂರಿನಂತೆ ಆಗಸ್ಟ್ 21 ರಂದು ಸುರತ್ಕಲ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 109/2025 ಕಲಂ 103(1), 238 ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದರು.
ಸದ್ರಿ ಪ್ರಕರಣದಲ್ಲಿ ಕೊಲೆ ಮಾಡಿದ ಲಕ್ಷ್ಮಣ್ ಮಂಡಲ್ ಅಲಿಯಾಸ್ ಲಖನ್ ಪತ್ತೆಯ ಬಗ್ಗೆ ಠಾಣಾ ಪಿಎಸ್ಸೈ ಶಶಿಧರ ಶೆಟ್ಟಿ ಹಾಗೂ ಎಎಸ್ಸೈ ರಾಜೇಶ್ ಆಳ್ವಾ ಅವರ ತಂಡವನ್ನು ರಚಿಸಿ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿಗೆ ಕಳುಹಿಸಿಕೊಡಲಾಗಿತ್ತು. ಪಿಎಸ್ಸೈ ಶಶಿಧರ ಶೆಟ್ಟಿ ಅವರ ತಂಡ ಪಶ್ಚಿಮ ಬಂಗಾಳ ಮೂಲದ ಲಕ್ಷ್ಮಣ್ ಮಂಡಲ್ (30) ಎಂಬಾತನನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದು, ಈ ಸಂದರ್ಭ ಲಕ್ಷ್ಮಣ್ ಮಂಡಲ್ ಜೂನ್ 24 ರಂದು ರಾತ್ರಿ 9 ಗಂಟೆಗೆ ಮುಕ್ಕದ ರೋಹನ್ ಎಸ್ಟೇಟ್ ಲೇಔಟಿನಲ್ಲಿ ನಿರ್ಮಾಣ ಹಂತದ ಕಟ್ಟಡದೊಳಗೆ ಲಕ್ಷ್ಮಣ್ ಮಂಡಲ್ ಹಾಗೂ ಮುಖೇಶ್ ಮಂಡಲ್ ಅವರು ಮಧ್ಯಪಾನ ಮಾಡುತ್ತಿರುವ ಸಂದರ್ಭ ಮುಖೇಶ್ ಮಂಡಲ್ ನು ಆರೋಪಿಯ ಪತ್ನಿಯ ಅಶ್ಲೀಲ ವೀಡಿಯೋಗಳನ್ನು ಸಂಗ್ರಹಿಸಿ ಮೊಬೈಲಿನಲ್ಲಿ ಇಟ್ಟು ತೋರಿಸಿದ್ದರಿಂದ ಕೋಪಗೊಂಡ ಆರೋಪಿ ಲಕ್ಷ್ಮಣ್ ಮಂಡಲ್ @ ಲಖನ್ ಪಕ್ಕದ ರೂಮಿನಲ್ಲಿದ್ದ ಕಬ್ಬಿಣದ ಸರಳನ್ನು ತೆಗೆದುಕೊಂಡು ತಲೆಗೆ ಹೊಡೆದು ಕೊಲೆ ಮಾಡಿ ಕೊಲೆಯನ್ನು ಮರೆ ಮಾಚಲು ಮೃತ ಶರೀರವನ್ನು ಅಲ್ಲೆ ಇದ್ದ ಟ್ಯಾಂಕ್ ಒಳಗೆ ಹಾಕಿರುವುದಾಗಿ ತಪೆÇ್ಪಪ್ಪಿಕೊಂಡಿದ್ದಾನೆ.
ಆರೋಪಿ ಲಕ್ಷ್ಮಣ್ ಮಂಡಲ್ ಅಲಿಯಾಸ್ ಲಖನ್ ಎಂಬಾತನನ್ನು ಸೆ 4 ರಂದು ದಸ್ತಗಿರಿ ಮಾಡಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯ 5 ದಿನಗಳವರೆಗೆ ಪೆÇಲೀಸ್ ಕಸ್ಟಡಿಗೆ ಒಪ್ಪಿಸಿದೆ. ಆರೋಪಿಯ ಮೇಲೆ ಪಶ್ಚಿಮ ಬಂಗಾಳ ರಾಜ್ಯದ ರತುವಾ ಪೆÇಲೀಸ್ ಠಾಣೆಯಲ್ಲಿ 2 ಹಲ್ಲೆ ಪ್ರಕರಣಗಳು ದಾಖಲಾಗಿದೆ.
ಸದ್ರಿ ಪ್ರಕರಣ ಬೇಧಿಸುವಲ್ಲಿ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೆÇಲೀಸ್ ಆಯುಕ್ತ ಶ್ರೀಕಾಂತ್ ಕೆ ಅವರ ಮಾರ್ಗದರ್ಶನದಲ್ಲಿ, ಸುರತ್ಕಲ್ ಪೆÇಲೀಸ್ ಠಾಣಾ ಪೆÇಲೀಸ್ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್ ಪಿ ಅವರ ನೇತೃತ್ವದಲ್ಲಿ ಪಿಎಸ್ಸೈಗಳಾದ ರಘುನಾಯಕ, ರಾಘವೇಂದ್ರ ನಾಯ್ಕ್, ಜನಾರ್ಧನ ನಾಯ್ಕ್, ಶಶಿಧರ ಶೆಟ್ಟಿ, ಎಎಸ್ಸೈಗಳಾದ ರಾಜೇಶ್ ಆಳ್ವಾ, ತಾರನಾಥ, ಸಿಬ್ಬಂದಿಗಳಾದ ಅಣ್ಣಪ್ಪ, ಉಮೇಶ್ ಕುಮಾರ್, ರಾಜೇಂದ್ರ ಪ್ರಸಾದ್, ಕಾತೀಕ್, ಮೋಹನ್ ಹಾಗೂ ನಾಗರಾಜ್ ಅವರು ಕಾರ್ಯನಿರ್ವಹಿಸಿದ್ದಾರೆ.




























0 comments:
Post a Comment