ತುಂಬೆ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ : ಶಿಕ್ಷಕರಿಗೆ ಪಿಟಿಎ ವತಿಯಿಂದ ಉಡುಗೊರೆ - Karavali Times ತುಂಬೆ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ : ಶಿಕ್ಷಕರಿಗೆ ಪಿಟಿಎ ವತಿಯಿಂದ ಉಡುಗೊರೆ - Karavali Times

728x90

20 September 2025

ತುಂಬೆ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ : ಶಿಕ್ಷಕರಿಗೆ ಪಿಟಿಎ ವತಿಯಿಂದ ಉಡುಗೊರೆ

ಬಂಟ್ವಾಳ, ಸೆಪ್ಟೆಂಬರ್ 20, 2025 (ಕರಾವಳಿ ಟೈಮ್ಸ್) : ಶಿಕ್ಷಕರು ಸಮಾಜ ನಿರ್ಮಾತೃಗಳು. ಒಂದು ಒಳ್ಳೆಯ ನಾಗರಿಕರನ್ನೊಳಗೊಂಡ ಸದೃಢ ಸಮಾಜ ಸ್ಥಾಪನೆಗೆ ಕಾರಣರಾಗುವ ಶಿಕ್ಷಕರೆಲ್ಲರೂ ವಂದನೀಯರು. ಈ ನಿಟ್ಟಿನಲ್ಲಿ ಇದನ್ನು ಅರ್ಥಮಾಡಿಕೊಂಡ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಸ್ವತಹ ಅಧ್ಯಾಪಕರಾಗಿ, ರಾಷ್ಟ್ರದ ಪ್ರಥಮ ಪ್ರಜೆಯಾಗಿ ಸ್ವ ಆದರ್ಶಗಳನ್ನು ಮೆರೆದು ತನ್ನ ಜನುಮ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಬೇಕೆಂದು ತಿಳಿಸಿರುವುದು ನಿಜಕ್ಕೂ ಅತ್ಯಂತ ಅರ್ಥಪೂರ್ಣ ಎಂದು ತುಂಬೆ ವಿದ್ಯಾ ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ನಿಸಾರ್ ಅಹಮ್ಮದ್ ವಳವೂರು ಅಭಿಪ್ರಾಯಪಟ್ಟರು. 

ತುಂಬೆ ವಿದ್ಯಾ ಸಂಸ್ಥೆಗಳ ಶಿಕ್ಷಕರ ದಿನಾಚರಣೆಯಲ್ಲಿ ಎಲ್ಲಾ ಬೋಧಕ-ಬೋಧಕೇತರರಿಗೆ ಪಿಟಿಎ ವತಿಯಿಂದ ಕೊಡಮಾಡಿದ ಉಡುಗೊರೆ ವಿತರಿಸಿ ಅವರು ಮಾತನಾಡಿದರು.

ಇದೇ ವೇಳೆ ವಿದ್ಯಾರ್ಥಿಗಳು ಉಪನ್ಯಾಸಕಕರಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಗೌರವಿಸಲಾಯಿತು. ವಿದ್ಯಾರ್ಥಿನಿ ಫಾತಿಮಾ ಹನಿಯಾ ಬಹುಮಾನಿತರನ್ನು ಪರಿಚಯಿಸಿದರು.

ಪಿಟಿಎ ಉಪಾಧ್ಯಕ್ಷೆ ಮೋಹಿನಿ ಸುವರ್ಣ, ಕಾರ್ಯಕಾರಿ ಸಮಿತಿ ಸದಸ್ಯರಾದ ಮ್ಯಾಕ್ಸಿಂ ಕುವೆಲ್ಹೋ, ಚಂಚಲಾಕ್ಷಿ, ಕಚೇರಿ ಅಧೀಕ್ಷಕ ಅಬ್ದುಲ್ ಕಬೀರ್, ಮುಖ್ಯ ಶಿಕ್ಷಕಿಯರಾದ ಮಲ್ಲಿಕಾ ಶೆಟ್ಟಿ, ವಿದ್ಯಾ ಕೆ ಮೊದಲಾದವರು ಭಾಗವಹಿಸಿದ್ದರು. 

ಕಾಲೇಜು ಪ್ರಾಂಶುಪಾಲ ವಿ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಪಿಟಿಎ ಕಾರ್ಯಕಾರಿ ಸಮಿತಿ ಸದಸ್ಯ ಶಾಫಿ ಅಮ್ಮೆಮ್ಮಾರ್ ವಂದಿಸಿದರು. ಶಿಕ್ಷಕ ರಮೇಶ್ ನಾಯಕ್ ಕಾರ್ಯಕ್ರಮ ನಿರೂಪಿದರು.

  • Blogger Comments
  • Facebook Comments

0 comments:

Post a Comment

Item Reviewed: ತುಂಬೆ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ : ಶಿಕ್ಷಕರಿಗೆ ಪಿಟಿಎ ವತಿಯಿಂದ ಉಡುಗೊರೆ Rating: 5 Reviewed By: karavali Times
Scroll to Top