ಬಂಟ್ವಾಳ, ಸೆಪ್ಟೆಂಬರ್ 02, 2025 (ಕರಾವಳಿ ಟೈಮ್ಸ್) : ತಾಲೂಕಿನ ನಾರ್ಶ ಸಿಂಗಾರಿ ಬೀಡಿ ಉದ್ಯಮಿ ಸುಲೈಮಾನ್ ಹಾಜಿ ಅವರ ಮನೆ ದರೋಡೆ ಪ್ರಕರಣದಲ್ಲಿ ಎಂಟನೇ ಆರೋಪಿಯಾಗಿ ಜೈಲು ಪಾಲಾಗಿದ್ದ ಮುಹಮ್ಮದ್ ಇಕ್ಬಾಲ್ ಎಂಬಾತನಿಗೆ ಮಂಗಳೂರು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ಆರೋಪಿ ಪರ ನ್ಯಾಯವಾದಿಗಳಾದ ಜಿ ಮುಹಮ್ಮದ್ ಕಬೀರ್ ಕೆಮ್ಮಾರ ಹಾಗೂ ಅನ್ಸಾರ್ ಮೂಲರಪಟ್ಣ ಅವರು ವಾದ ಮಂಡಿಸಿದ್ದಾರೆ.
ವಿಟ್ಲ ಪೆÇಲೀಸ್ ಠಾಣಾ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶ ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಹಾಜಿ ನಾರ್ಶ ಅವರ ಮನೆಯಲ್ಲಿ ಜನವರಿ 3 ರಂದು ಶುಕ್ರವಾರ ರಾತ್ರಿ ಇಡಿ ಅಧಿಕಾರಿಗಳ ನೆಪದಲ್ಲಿ ತಂಡವೊಂದು ದಾಳಿ ನಡೆಸಿ ದರೋಡೆ ನಡೆಸಿತ್ತು.
0 comments:
Post a Comment