ಪುತ್ತೂರು, ಸೆಪ್ಟೆಂಬರ್ 02, 2025 (ಕರಾವಳಿ ಟೈಮ್ಸ್) : ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಸಮಾರೋಪ ದಿನವಾದ ಮಂಗಳವಾರ ನಡೆದ ಅನ್ನ ಸಂತರ್ಪಣೆ ವೇಳೆ ಮುಸ್ಲಿಮರ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಮುಖಂಡರು ಸಿಹಿ ತಿಂಡಿ ವಿತರಿಸುವ ಮೂಲಕ ಸಾಮಾಜಿಕ ಮತೀಯ ಸೌಹಾರ್ದತೆ ಮೆರೆದಿದ್ದಾರೆ.
ಕೆಪಿಸಿಸಿ ಮುಖಂಡ ಹನೀಫ್ ಬಗ್ಗುಮೂಲೆ, ಪುತ್ತೂರು ಮಿಲಾದ್ ಸಮಿತಿ ಉಪಾಧ್ಯಕ್ಷ ಸಿದ್ದೀಕ್ ಸೂರ್ಯ, ಕೊಡಾಜೆ ಐಕ್ಯ ವೇದಿಕೆಯ ಕಾರ್ಯದರ್ಶಿ ಮನ್ಸೂರ್ ನೇರಳಕಟ್ಟೆ, ಪ್ರಮುಖರಾದ ಗಫೂರ್ ಪಾಟ್ರಕೋಡಿ ಹಾಗೂ ಶಬ್ಬೀರ್ ಅಳಕೆಮಜಲು ಸಾಮರಸ್ಯ ಸಾರುವ ಕಾರ್ಯಕ್ರಮದ ಮುಂದಾಳುತ್ವ ವಹಿಸಿ ಗಮನ ಸೆಳೆದರು.
0 comments:
Post a Comment