ಬಂಟ್ವಾಳ, ಸೆಪ್ಟೆಂಬರ್ 02, 2025 (ಕರಾವಳಿ ಟೈಮ್ಸ್) : ಮುಡಿಪು ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ನಡೆದ ಪ್ರೌಢಶಾಲಾ ವಿಭಾಗದ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಬಂಟ್ವಾಳ-ಕೆಳಗಿನಪೇಟೆಯ ತೌಹೀದ್ ಆಂಗ್ಲ ಮಾಧ್ಯಮ ಶಾಲಾ ತಂಡ ದ್ವಿತೀಯ ಸ್ಥಾನ ಗಳಿಸಿದೆ. ಈ ಪೈಕಿ 7 ಮಂದಿ ವಿದ್ಯಾರ್ಥಿಗಳಾದ ಮುಹಮ್ಮದ್ ಆದಿಲ್, ಯೂಸುಫ್ ಶಯಾನ್, ಮುಹಮ್ಮದ್ ನಿಶಾನ್ ಅಲಿ, ಮುಹಮ್ಮದ್ ಬುಖಾರಿ, ಮುಹಮ್ಮದ್ ಹಿಶಾಂ, ಮುಹಮ್ಮದ್ ಶಮೂನ್ ಹಾಗೂ ಮುಹಮ್ಮದ್ ತಸ್ನೀಂ ಅವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
2 September 2025
- Blogger Comments
- Facebook Comments
Subscribe to:
Post Comments (Atom)
0 comments:
Post a Comment