ಬಂಟ್ವಾಳ, ಸೆಪ್ಟೆಂಬರ್ 05, 2025 (ಕರಾವಳಿ ಟೈಮ್ಸ್) : ಮಾಣಿ ಸಮೀಪದ ಕೊಡಾಜೆ ಬದ್ರಿಯಾ ಜುಮಾ ಮಸೀದಿ ವತಿಯಿಂದ ಪ್ರವಾದಿ ಮಹಮ್ಮದ್ ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ಅವರ 1500ನೇ ಜನ್ಮ ದಿನಾಚರಣೆ ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.
ಮಸೀದಿಯಲ್ಲಿ ಸುಬಹಿ ನಮಾಜ್ ಬಳಿಕ ಅಶ್ರಕ ಬೈತ್ ಆಲಾಪನೆ ನಡೆಯಿತು. ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ, ಮಸೀದಿ ಮಾಜಿ ಅಧ್ಯಕ್ಷ, ಹಿರಿಯರಾದ ಅಬೂಬಕ್ಕರ್ (ಉಂಞõÁಕ) ಕೊಡಾಜೆ ಅವರಿಗೆ ಹಸಿರು ಧ್ವಜ ಹಸ್ತಾಂತರಿಸುವ ಮೂಲಕ ಮಿಲಾದ್ ಜಾಥಾಗೆ ಚಾಲನೆ ನೀಡಿದರು. ಸ್ಥಳೀಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೆÇನ್ಮಳ ದುಆ ನೆರವೇರಿಸಿದರು.
ಮೆರವಣಿಗೆಯುದ್ದಕ್ಕೂ ಭಾವೈಕ್ಯತಾ ವೇದಿಕೆ, ಐಕ್ಯತಾ ವೇದಿಕೆ ಕೊಡಾಜೆ, ಮಿಲಾದ್ ಫ್ರೆಂಡ್ಸ್ ಕೊಡಾಜೆ, ಮಿಲಾದ್ ಕಮಿಟಿ ನೇರಳಕಟ್ಟೆ ವತಿಯಿಂದ ಸಿಹಿ ತಿಂಡಿ, ತಂಪು ಪಾನೀಯ, ಐಸ್ ಕ್ರೀಂ ವಿತರಿಸಲಾಯಿತು. ಜಾಥಾದಲ್ಲಿ ವಿದ್ಯಾರ್ಥಿಗಳ ದಫ್ ತಂಡ, ಫ್ಲವರ್ ಶೋ, ಸ್ಕೌಟ್ ತಂಡಗಳ ಪಥ ಸಂಚಲನ ಗಮನ ಸೆಳೆಯಿತು.
ಮಸೀದಿ ಆಡಳಿತ ಸಮಿತಿ ಕಾರ್ಯದರ್ಶಿ ಎಸ್ ಎಂ ರಫೀಕ್ ಹಾಜಿ ನೇರಳಕಟ್ಟೆ, ಉಪಾಧ್ಯಕ್ಷ ಸಿದ್ದೀಕ್ ಪರ್ಲೊಟ್ಟು, ಕೋಶಾಧಿಕಾರಿ ಅಬ್ಬಾಸ್ ಪರ್ಲೊಟ್ಟು, ಜೊತೆ ಕಾರ್ಯದರ್ಶಿ ಶಾಹುಲ್ ಹಮೀದ್ ಪರ್ಲೊಟ್ಟು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಮೀರ್, ಪರ್ಲೊಟ್ಟು ಅಬೂಬಕ್ಕರ್ ಸಿದ್ದೀಕ್ ಜುಮಾ ಮಸೀದಿ ಅಧ್ಯಕ್ಷ ರಶೀದ್ ಪರ್ಲೊಟ್ಟು, ಪಂತಡ್ಕ ಮಸೀದಿ ಉಸ್ತುವಾರಿ ಸಮಿತಿ ಅಧ್ಯಕ್ಷ ಹಂಝ ಹಾಜಿ, ಉಪಾಧ್ಯಕ್ಷ ಇಬ್ರಾಹಿಂ ಹಾಜಿ ನೆಡ್ಯಾಲು, ಪಾರ್ಪಕಜೆ ಮಸೀದಿ ಕಾರ್ಯದರ್ಶಿ ಇಬ್ರಾಹಿಂ ಕರೀಂ ಎಸ್, ಭಾವೈಕ್ಯತಾ ವೇದಿಕೆಯ ಪ್ರಮುಖರಾದ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಬಾಲಕೃಷ್ಣ ಆಳ್ವ ಕೊಡಾಜೆ, ಇಬ್ರಾಹಿಂ ಕೆ ಮಾಣಿ, ಬಂಟ್ವಾಳ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ ಪೂಜಾರಿ, ನಿರಂಜನ್ ರೈ, ನಾರಾಯಣ ಸಾಲಿಯಾನ್, ಡಾ ಮನೋಹರ ರೈ, ರವಿ ಬಾಬನಕಟ್ಟೆ, ವಿಕೇಶ್ ಶೆಟ್ಟಿ , ಸತೀಶ್ ಬಾಯಿಲ, ಪ್ರವೀಣ ಬಾಬನಕಟ್ಟೆ, ಸುಂದರ, ಮಂಜುನಾಥ ಸಾಲಿಯಾನ್, ಐಕ್ಯ ವೇದಿಕೆಯ ಅಧ್ಯಕ್ಷ ಫಾರೂಕ್ ಗೋಳಿಕಟ್ಟೆ, ಪ್ರಮುಖರಾದ ರಝಾಕ್ ಅನಂತಾಡಿ, ಶರೀಫ್ ಗೋವಾ, ರಿಯಾಝ್ ನೇರಳಕಟ್ಟೆ, ಅಶ್ರಫ್ ಭಾರತ್ ಕಾರ್ಸ್, ಎಸ್ ಎಸ್ ರಫೀಕ್ ಕೊಡಾಜೆ, ಮನ್ಸೂರ್ ನೇರಳಕಟ್ಟೆ, ನೇರಳಕಟ್ಟೆ ಮಿಲಾದ್ ಕಮಿಟಿಯ ಕಾರ್ಯದರ್ಶಿ ಇಲ್ಯಾಸ್ ನೇರಳಕಟ್ಟೆ, ಪ್ರಮುಖರಾದ ನವಾಝ್ ಭಗವಂತಕೋಡಿ, ಫಾರೂಕ್ ಇಂಜಿನಿಯರ್, ಅಥಾವುಲ್ಲಾ ನೇರಳಕಟ್ಟೆ, ಸಮದ್, ಇಂತಿಯಾಝ್, ಕೊಡಾಜೆ ಮಿಲಾದ್ ಫ್ರೆಂಡ್ಸ್ ಪ್ರಮುಖರಾದ ಇಸ್ಮಾಯಿಲ್ ಅನಂತಾಡಿ, ಶಾಕಿರ್ ಕೆಂಪುಗುಡ್ಡೆ, ಫೈಝಲ್ ಕೊಡಾಜೆ, ಶಾಹಿನ್ ನೇರಳಕಟ್ಟೆ, ತಮೀಮ್ (ಚಮ್ಮು) ನೇರಳಕಟ್ಟೆ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮದ್ರಸ ಉಸ್ತುವಾರಿ ಲತೀಫ್ ನೇರಳಕಟ್ಟೆ ಸ್ವಾಗತಿಸಿ, ವಂದಿಸಿದರು.
0 comments:
Post a Comment