ಬಂಟ್ವಾಳ, ಸೆಪ್ಟೆಂಬರ್ 03, 2025 (ಕರಾವಳಿ ಟೈಮ್ಸ್) : ಗಣೇಶ ಚತುರ್ಥಿ ಸಂದರ್ಭ ಹುಲಿವೇಷಧಾರಿಗಳು ಅಂಗಡಿಗೆ ಬಂದ ಫೋಟೋ ದುರುಪಯೋಗಪಡಿಸಿಕೊಂಡ ಕಿಡಿಗೇಡಿಗಳು ವಾಟ್ಸಪ್ ಮೂಲಕ ಪ್ರಚೋದನಕಾರಿ ಸುಳ್ಳು ಬರಹ ವೈರಲ್ ಮಾಡಿದ ಬಗ್ಗೆ ಪ್ರಶ್ನಿಸಿದ್ದಕ್ಕೆ ಜೀವಬೆದರಿಕೆ ಒಡ್ಡಿದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಬಿ ಮೂಡ ಗ್ರಾಮದ ತಾಳಿಪಡ್ಪು ನಿವಾಸಿ ಇರ್ಫಾನ್ ಟಿ (28) ಅವರು ಪೊಲೀಸರಿಗೆ ದೂರು ನೀಡಿದ್ದು, ಆಗಸ್ಟ್ 30 ರಂದು ಮಧ್ಯಾಹ್ನ ಸುಮಾರು 1.30 ರ ವೇಳೆಗೆ ಇವರ ಬಟ್ಟೆ ಅಂಗಡಿಗೆ ಗಣೇಶೋತ್ಸವ ಸಂದರ್ಭ ಬಿ ಸಿ ರೋಡು-ಕೈಕಂಬದ ಹುಲಿ ವೇಷದಾರಿಗಳು ಬೇರೆಯವರ ಅಂಗಡಿಗೆ ಹೋಗುವ ಹಾಗೆ ಇವರ ಅಂಗಡಿಗೂ ಬಂದಿದ್ದಾರೆ. ಇವರ ಅಂಗಡಿಯಲ್ಲಿ ತೆಗೆದ ಫೋಟೋವನ್ನು ದುರುಪಯೋಗಪಡಿಸಿಕೊಂಡ ಶಫೀಕ್ ಎಂಬಾತ ಪ್ರಚೋದನಕಾರಿ ಸಂಘರ್ಷ ಉಂಟಾಗುವಂತಹ ಸುಳ್ಳು ಬರಹವನ್ನು ಬರೆದು ವಾಟ್ಸಪ್ ಗ್ರೂಪಿನಲ್ಲಿ ಹರಿಬಿಟ್ಟಿದ್ದಾನೆ. ಈ ಬಗ್ಗೆ ಇರ್ಫಾನ್ ಅವರು ಶಫೀಕನ ಅಣ್ಣ ಸಫ್ವಾನ್ ಎಂಬಾತನಲ್ಲಿ ಮರುದಿನ ಸಂಜೆ 5 ಗಂಟೆ ವೇಳೆಗೆ ಮೊಬೈಲ್ ಮೂಲಕ ಕರೆ ಮಾಡಿ ವಿಚಾರಿಸಿದಾಗ ಸಫ್ವಾನ್ ಇವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 99/2025 ಕಲಂ 192, 353(1),(ಬಿ), 353(2), 351(3), ಜೊತೆಗೆ 3(5) ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿದೆ.











0 comments:
Post a Comment