ಮಂಗಳೂರು, ಸೆಪ್ಟೆಂಬರ್ 03, 2025 (ಕರಾವಳಿ ಟೈಮ್ಸ್) : ನಗರದ ಎ.ಬಿ ಶೆಟ್ಟಿ ವೃತ್ತದ ಬಳಿ ಇರುವ ದರ್ಗಾದ ಎದುರು ಸೆಪ್ಟೆಂಬರ್ 2ರಂದು ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ಅಪಘಾತದಲ್ಲಿ ಸುಮಾರು 60 ವರ್ಷದ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದು, ಮೃತದೇಹವನ್ನು ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
ಮೃತ ದೇಹದ ಚಹರೆ : ಸುಮಾರು 5.7 ಅಡಿ ಎತ್ತರ, ಸಾಧಾರಣ ಶರೀರ, ಗೋಧಿ ಮೈ ಬಣ್ಣ, ಬಲ ಪಕ್ಕೆಲುಬಿನಲ್ಲಿ 1 ಇಂಚು ಅಗಲದ ಕಪ್ಪು ಮಚ್ಚೆ ಹೊಂದಿರುತ್ತಾರೆ. ಕಾಲಿನ ಹೆಬ್ಬೆರಳು ತೋರು ಬೆರಳು ತುಂಡು ಆಗಿರುತ್ತದೆ. ನೀಲಿ ಹಾಗೂ ಗಾಢ ಗುಲಾಬಿ ಗೆರೆಗಳಿರುವ ಲೈಟ್ ಗುಲಾಬಿ ಕಲರ್ ಶರ್ಟ್, ಬೂದು ಕಲರ್ ಪ್ಯಾಂಟ್, ಕಂದು ಬಣ್ಣದ ಚಡ್ಡಿ ಹಾಗೂ ಕಪ್ಪು ಬೆಲ್ಟ್ ಧರಿಸಿದ್ದರು.
ಮೃತದೇಹದ ಗುರುತು ಪತ್ತೆಯಾದಲ್ಲಿ ಪಾಂಡೇಶ್ವರ ಸಂಚಾರ ಪಶ್ಚಿಮ ಪೆÇಲೀಸು ಠಾಣೆ ಸಂಪರ್ಕಿಸುವಂತೆ ಪೆÇಲೀಸ್ ಉಪನಿರೀಕ್ಷಕರು ತಿಳಿಸಿದ್ದಾರೆ.













0 comments:
Post a Comment