ಬಂಟ್ವಾಳ, ಸೆಪ್ಟೆಂಬರ್ 05, 2025 (ಕರಾವಳಿ ಟೈಮ್ಸ್) : ತಾಲೂಕಿನ ಪೆರ್ನೆ ಗ್ರಾಮದ ದೇಜಪ್ಪ ಮೂಲ್ಯ ಅವರ ಸಾಕು ದನವನ್ನು ಕದ್ದು ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿ ಹತ್ಯೆಗೈದು ಮಾಂಸ ಮಾಡಿ ಸಾಗಾಟ ಮಾಡಿದ ಪ್ರಕರಣ ಅತ್ಯಂತ ಹೇಯ ಕೃತ್ಯವಾಗಿದ್ದು, ಯಾವ ಸಮಾಜವು ಇದನ್ನು ಬೆಂಬಲಿಸುವುದಿಲ್ಲ ಮತ್ತು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರವೂ ಇದರ ಹಿಂದೆ ಇದ್ದು ಪೆÇಲೀಸರು ಆರೋಪಿಯನ್ನು ತಕ್ಷಣ ಬಂಧಿಸಲಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ರೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸಂಜೆ ಘಟನೆ ನಡೆದ ದೇಜಪ್ಪ ಮೂಲ್ಯ ಅವರ ಮನೆಗೆ ಭೇಟಿ ನೀಡಿ ಮನೆ ಮಂದಿಯಿಂದ ಮಾಹಿತಿ ಪಡೆದ ಶಾಸಕರು ಹಸುವನ್ನು ಕೊಟ್ಟಿಗೆಯಿಂದ ಕದ್ದು ಅದನ್ನು ಹತ್ಯೆ ಮಾಡಿರುವುದು ಯಾವ ಸಮಾಜ ಕೂಡ ಒಪ್ಪದ ಹೇಯ ಕೃತ್ಯವಾಗಿದೆ. ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಪೆÇಲೀಸರಿಗೆ ಸೂಚಿಸಿದ್ದೇನೆ. ಈ ಬಗ್ಗೆ ಜಿಲ್ಲಾ ಎಸ್ಪಿ ಜೊತೆಯೂ ಮಾತನಾಡಿದ್ದೇನೆ. ಆರೋಪಿಗಳು ಯಾರೇ ಆದರೂ ಅವರನ್ನು ಸುಮ್ಮನೆ ಬಿಡಬಾರದು ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಮುಂದೆ ಕೊಟ್ಟಿಗೆಯಿಂದ ಹಸುವನ್ನು ಕದ್ದು ಕೊಂಡೊಯ್ಯುವವರಿಗೆ ಪೆÇಲೀಸರು ಕೊಡುವ ಶಿಕ್ಷೆ ಪಾಠವಾಗಬೇಕು. ಮುಂದೆಂದೂ ಇಂಥಹ ಹೀನ ಕೃತ್ಯ ನಮ್ಮ ಕ್ಷೇತ್ರ ಹಾಗೂ ಎಲ್ಲೂ ನಡೆಯಬಾರದು ಎಂದರು.
ಈಗಾಗಲೇ ಹೊಸ ಪೊಲೀಸ್ ಅಧಿಕಾರಿಗಳ ಕಠಿಣ ಹಾಗೂ ನಿಷ್ಪಕ್ಷಪಾತ ಕ್ರಮದಿಂದ ಜಿಲ್ಲೆಯ ಜನ ಶಾಂತಿಯಿಂದ ಸದ್ಯಕ್ಕೆ ಬದುಕುತ್ತಿದ್ದಾರೆ. ಜಿಲ್ಲೆಯಲ್ಲಿ ನೆಲೆಸಿರುವ ಶಾಂತಿಯನ್ನು ಕದಡುವ ಹುನ್ನಾರ ಈ ಘಟನೆಯ ಹಿಂದೆ ಕಂಡು ಬರುತ್ತಿದೆ. ಆದರೆ ದುಷ್ಕಿರ್ಮಿಗಳ ಕೃತ್ಯ ಯಶಸ್ವಿಯಾಗಲು ಬಿಡುವುದಿಲ್ಲ. ಜಿಲ್ಲೆಯ ಪೆÇಲೀಸ್ ಅಧಿಕಾರಿಗಳು ಸಮರ್ಥರಿದ್ದು, ಆರೋಪಿಗಳ ಹೆಡೆಮುರಿ ಕಟ್ಟಿಯೇ ಕಟ್ಟುತ್ತಾರೆ ಎಂದು ಅಶೋಕ್ ರೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
0 comments:
Post a Comment