ಬಂಟ್ವಾಳ, ಸೆಪ್ಟೆಂಬರ್ 08, 2025 (ಕರಾವಳಿ ಟೈಮ್ಸ್) : ಪದವಿ ಮುಗಿಸಿ ಸಮರ್ಪಕವಾದ ಉದ್ಯೋಗ ಇಲ್ಲದೆ ನೊಂದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಜಿಪಮೂಡ ಗ್ರಾಮದ ಕೊಳಕೆ-ಕಲ್ಲಮಜಲು ಎಂಬಲ್ಲಿ ಸೆ 6 ರಂದು ಸಂಜೆ ಸಂಭವಿಸಿದೆ.
ಇಲ್ಲಿನ ನಿವಾಸಿ ಜನಾರ್ದನ ಮೂಲ್ಯ ಎಂಬವರ ಪುತ್ರ ದೀಕ್ಷಿತ್ (26) ಎಂದು ಹೆಸರಿಸಲಾಗಿದೆ. ಈತ ಪದವಿ ಮುಗಿಸಿ ಸರಿಯಾದ ಉದ್ಯೋಗ ಇಲ್ಲದೆ ಮನೆಯಲ್ಲೇ ಇದ್ದು, ಸೆ 6 ರಂದು ಸಂಜೆ ಮನೆಯ ಕೋಣೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ತಕ್ಷಣ ಈತನನ್ನು ಬಿ ಸಿ ರೋಡಿನ ಸೋಮಯಾಜಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಮೃತನ ಸಹೋದರ ಪುನೀತ್ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
0 comments:
Post a Comment