ಅಲ್ಪಸಂಖ್ಯಾತ ವರ್ಗದ ಯುವಕ/ ಯುವತಿಯರಿಗೆ ನವ ಉದ್ಯಮ ಆರಂಭಿಸಲು ಅರ್ಜಿ ಆಹ್ವಾನ - Karavali Times ಅಲ್ಪಸಂಖ್ಯಾತ ವರ್ಗದ ಯುವಕ/ ಯುವತಿಯರಿಗೆ ನವ ಉದ್ಯಮ ಆರಂಭಿಸಲು ಅರ್ಜಿ ಆಹ್ವಾನ - Karavali Times

728x90

3 September 2025

ಅಲ್ಪಸಂಖ್ಯಾತ ವರ್ಗದ ಯುವಕ/ ಯುವತಿಯರಿಗೆ ನವ ಉದ್ಯಮ ಆರಂಭಿಸಲು ಅರ್ಜಿ ಆಹ್ವಾನ

ಮಂಗಳೂರು, ಸೆಪ್ಟೆಂಬರ್ 03, 2025 (ಕರಾವಳಿ ಟೈಮ್ಸ್) : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಯುವಕ/ ಯುವತಿಯರಿಗೆ ನವೋದ್ಯಮಗಳನ್ನು ಪ್ರಾರಂಭಿಸಲು ಉತ್ತೇಜನ ನೀಡುವ ಯೋಜನೆಯನ್ನು ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಸಹಯೋಗದೊಂದಿಗೆ 2025ರಲ್ಲಿನ ಮಾರ್ಗಸೂಚಿಗಳೊಂದಿಗೆ ಜಾರಿಗೊಳಿಸಲಾಗಿದೆ. 

ಈ ಯೋಜನೆಗೆ ವೆಬ್‍ಸೈಟ್ https://eitbt.karnataka.gov.in/en  ಮೂಲಕ ಅರ್ಜಿ ಸಲ್ಲಿಸಬಹುದು. ಸೆಪ್ಟೆಂಬರ್ 15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ  ದೂರವಾಣಿ ಸಂಖ್ಯೆ 080-2223100 ಅಥವಾ ಇ-ಮೇಲ್ elevate.ktech@ka.gov.in ಸಂರ್ಪಕಿಸಬಹುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಅಲ್ಪಸಂಖ್ಯಾತ ವರ್ಗದ ಯುವಕ/ ಯುವತಿಯರಿಗೆ ನವ ಉದ್ಯಮ ಆರಂಭಿಸಲು ಅರ್ಜಿ ಆಹ್ವಾನ Rating: 5 Reviewed By: karavali Times
Scroll to Top