ಮಂಗಳೂರು, ಅಕ್ಟೋಬರ್ 16, 2025 (ಕರಾವಳಿ ಟೈಮ್ಸ್) : ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆ ನಿಗ್ರಹಕ್ಕೆ ಮುಂದಾಗಿರುವ ಜಿಲ್ಲೆಯ ಪೊಲೀಸರು ಇತ್ತೀಚೆಗಷ್ಟೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 123/2025 ಕಲಂ 303 ಬಿ ಎನ್ ಎಸ್ ಕಲಂ 4, 7, 12 ಗೋ ಸಂರಕ್ಷಣಾ ಕಾಯಿದೆ ಮತ್ತು 11(ಡಿ) ಗೋಹತ್ಯೆ ನಿಷೇಧ ಕಾಯ್ದೆಯಡಿಯಲ್ಲಿ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರಿಪಳ್ಳ ಹಸನಬ್ಬ ಎಂಬವರ ಮನೆ/ ಅಕ್ರಮ ಕಸಾಯಿ ಖಾನೆಯನ್ನು ಮಂಗಳೂರು ಉಪವಿಭಾಗ ದಂಡಾಧಿಕಾರಿಗಳು ಮುಟ್ಟುಗೋಲು ಹಾಕಿರುವ ಘಟನೆಯ ಬೆನ್ನಲ್ಲೆ ಇದೀಗ ಮತ್ತೆ ಮೂರು ಅಕ್ರಮ ಜಾನುವಾರು ವಧಾ ಪ್ರಕರಣಗಳಲ್ಲಿ ಮುಟ್ಟುಗೋಲಿಗಾಗಿ ದಂಡಾಧಿಕಾರಿಗಳಿಗೆ ವರದಿ ನಿವೇದಿಸಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 125/2025, ಕಲಂ 303(2), ಬಿ ಎನ್ ಎಸ್ ಕಲಂ 4, 12 ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ-2020 ಹಾಗೂ ಕಲಂ 11(ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆಯಲ್ಲಿ ತನಿಖೆಯ ಸಮಯ ಬಂಟ್ವಾಳ ತಾಲೂಕು ಸಂಗಬೆಟ್ಟು ಗ್ರಾಮದ ಕೆರೆಬಳಿ ಎಂಬಲ್ಲಿ ನಾಸೀರ್ ಮತ್ತು ಇತರರು ದನವನ್ನು ತಂದು ವಧೆ ಮಾಡಿದ ಸ್ಥಳವಾದ ಇದಿನಬ್ಬ ಎಂಬವರ ವಾಸದ ಮನೆ, ಕಸಾಯಿ ಖಾನೆಯ ಶೆಡ್ ಮತ್ತು ವಧೆ ಮಾಡಲು ಜಾನುವಾರನ್ನು ಕಟ್ಟು ಹಾಕಿದ ಶೆಡ್ಡನ್ನು ಕಲಂ 8 (1) ರ ಪ್ರಕಾರ ತನಿಖಾಧಿಕಾರಿಗಳು ಜಪ್ತಿ ಮಾಡಿಕೊಂಡು ಮುಟ್ಟುಗೋಲಿಗಾಗಿ ಮಂಗಳೂರು ಉಪವಿಭಾಗೀಯ ದಂಡಾಧಿಕಾರಿಗಳಿಗೆ ವರದಿ ನಿವೇದಿಸಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 103/2025 ಕಲಂ 4, 5, 7, 12 ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ-2020, 112 (2), 303(2) ಬಿ ಎನ್ ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದ್ದು, ತನಿಖೆಯ ಸಮಯ ಆರೋಪಿಯು ಕೃತ್ಯಕ್ಕೆ ಬಳಸಿರುವ ಸ್ಥಳವಾದ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಬಳಿಯಿರುವ ಮಹಮ್ಮದ್ ರಫೀಕ್ ಅವರ ಮನೆ ಪ್ರಸ್ತುತ ಖಾಲಿ ಜಾಗವನ್ನು ಕಲಂ 8 (1) ರ ಪ್ರಕಾರ ತನಿಖಾಧಿಕಾರಿಗಳು ಜಪ್ತಿ ಮಾಡಿಕೊಂಡು ಮುಟ್ಟುಗೋಲಿಗಾಗಿ ಪುತ್ತೂರು ಉಪವಿಭಾಗೀಯ ದಂಡಾಧಿಕಾರಿಗಳಿಗೆ ವರದಿ ನಿವೇದಿಸಿಕೊಂಡಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 76/2025, ಕಲಂ 331(4), 305 ಬಿ ಎನ್ ಎಸ್-2023 ಕಲಂ 4, 12 ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ-2020ರಂತೆ ತನಿಖಾ ವೇಳೆ ಆರೋಪಿ ಮೊಹಮ್ಮದ್ ಮನ್ಸೂರ್ ಎಂಬಾತನು ವಧೆ ಮಾಡಿ ಮಾಂಸವನ್ನು ಮಾರಾಟ ಮಾಡುತ್ತಿದ್ದ ಸ್ಥಳವಾದ ಮಂಗಳೂರು ನಗರ ವ್ಯಾಪ್ತಿಯ ಜೆ.ಎಂ ರಸ್ತೆ, ಭಟ್ಕಳ ಬಜಾರ್, ಬಂದರ್-ಕುದ್ರೋಳಿ ಬಳಿಯಿರುವ ಕಟ್ಟಡವನ್ನು ಕಲಂ 8 (1) ರ ಪ್ರಕಾರ ತನಿಖಾಧಿಕಾರಿಗಳು ಜಪ್ತಿ ಮಾಡಿಕೊಂಡು ಮುಟ್ಟುಗೋಲಿಗಾಗಿ ಮಂಗಳೂರು ಉಪವಿಭಾಗೀಯ ದಂಡಾಧಿಕಾರಿಗಳಿಗೆ ವರದಿ ನಿವೇದಿಸಿಕೊಂಡಿದ್ದಾರೆ.
ಮೇಲಿನ ಮೂರು ಪ್ರಕರಣದಲ್ಲಿ ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ-2020ರಡಿಯಲ್ಲಿ ಕೃತ್ಯಕ್ಕೆ ಬಳಸಿರುವ ಸ್ಥಳ ಮತ್ತು ಕಟ್ಟಡಗಳನ್ನು ಜಪ್ತಿ ಮಾಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಹಾಗೂ ಅಕ್ರಮ ಚಟುವಟಿಕೆಗಳಿಗೆ ಸ್ಥಳವಕಾಶ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಎಸ್ಪಿ ಡಾ ಅರುಣ್ ಕೆ ಅವರು ಎಚ್ಚರಿಸಿದ್ದಾರೆ.
















0 comments:
Post a Comment