ಬಂಟ್ವಾಳ, ಅಕ್ಟೋಬರ್ 05, 2025 (ಕರಾವಳಿ ಟೈಮ್ಸ್) : ನಿಲ್ಲಿಸಿದ್ದ ಲಾರಿಯ ಬ್ಯಾಟರಿ ಕಳವುಗೈದ ಘಟನೆ ಪುಣಚ ಗ್ರಾಮದ ಪರಿಯಾಲ್ತಡ್ಕ ಶ್ರೀದೇವಿ ಶಾಮಿಯಾನದ ಅಂಗಡಿ ಎದುರು ನಡೆದಿದೆ.
ಪುಣಚ ನಿವಾಸಿ ದಿನೇಶ್ ನಾಯ್ಕ ಡಿ (45) ಅವರು ಪೆರಿಯಾಲ್ತಡ್ಕದಲ್ಲಿ ಸುಮಾರು 11 ವರ್ಷದಿಂದ ಶ್ರೀದೇವಿ ಶಾಮಿಯಾನ ಅಂಗಡಿ ವ್ಯವಹಾರ ಮಾಡಿಕೊಂಡಿದ್ದು ಶಾಮಿಯಾನ ವಸ್ತುಗಳನ್ನು ಸಾಗಾಟ ಮಾಡುವ ಸ್ವರಾಜ್ ಮಜ್ದಾ ಲಾರಿಯನ್ನು ಸೆ 28 ರಂದು ಸಂಜೆ 6 ಗಂಟೆಗೆ ಅಂಗಡಿ ಎದುರು ನಿಲ್ಲಿಸಿದ್ದರು. ಸೆ 30 ರಂದು ಶಾಮಿಯಾನ ಸಾಗಾಟ ನಡೆಸುವರೇ ಲಾರಿ ಚಾಲನೆ ಮಾಡುವ ಸಂದರ್ಭ ಬ್ಯಾಟರಿ ಕಳವುಗೈದಿರುವುದು ಬೆಳಕಿಗೆ ಬಂದಿದೆ. ಕಳವಾಗಿರುವ ಬ್ಯಾಟರಿಯ ಮೌಲ್ಯ 6 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













0 comments:
Post a Comment