ಬಂಟ್ವಾಳ, ಅಕ್ಟೋಬರ್ 29, 2025 (ಕರಾವಳಿ ಟೈಮ್ಸ್) : ಕಾರೊಂದು ಹೆದ್ದಾರಿಯ ಡಿವೈಡರಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಪಾಣೆಮಂಗಳೂರು ರಾಣಾ ಮಾರ್ಬಲ್ ಸಮೀಪ ಅ 28 ರಂದು ಸಂಜೆ ವೇಳೆ ಸಂಭವಿಸಿದೆ.
ಮೃತ ಕಾರು ಚಾಲಕನನ್ನು ಕಡಬ ತಾಲೂಕಿನ ಸವಣೂರು ನಿವಾಸಿ ಕಾರ್ತಿಕ್ ಕೆ ಎನ್ (23) ಎಂದು ಹೆಸರಿಸಲಾಗಿದೆ. ಗಾಯಗೊಂಡವರನ್ನು ಸಹ ಪ್ರಯಾಣಿಕರಾದ ಜಗದೀಶ್ ಹಾಗೂ ದೀಕ್ಷಿತ್ ಎಂದು ಹೆಸರಿಸಲಾಗಿದೆ. ಈ ಬಗ್ಗೆ ಕಾರಿನಲ್ಲಿ ಸಹಪ್ರಯಾಣಿಕ ಕಡಬ ತಾಲೂಕು ಕೊಂಬಾರು ಗ್ರಾಮದ ಕಮರ್ಕಜೆ ನಿವಾಸಿ ಲಿತಿನ್ ಕೆ ಎಂ (20) ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಕಾರಿನಲ್ಲಿದ್ದ ಹರ್ಷಿತ್ ಕುಮಾರ್ ಸಹಿತ ಇವರೆಲ್ಲರೂ ಸ್ನೇಹಿತರಾಗಿದ್ದು, ಕಾರಿನಲ್ಲಿ ಅಗತ್ಯ ಕೆಲಸಕ್ಕಾಗಿ ಮಂಗಳೂರಿಗೆ ತೆರಳಿ ಕೆಲಸ-ಕಾರ್ಯ ಮುಗಿಸಿದ ಬಳಿಕ ಸಂಜೆ ವೇಳೆ ಪುತ್ತೂರಿಗೆ ವಾಪಾಸಾಗುತ್ತಿದ್ದ ವೇಳೆ ಪಾಣೆಮಂಗಳೂರು ಹೆದ್ದಾರಿಯ ರಾಣಾ ಮಾರ್ಬಲ್ ಸಮೀಪ ಕಾರು ಚಾಲಕನ ನಿಯಂತ್ರಣ ಮೀರಿ ಹೆದ್ದಾರಿಯ ಡಿವೈಡರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಕಾರ್ತಿಕ್, ಜಗದೀಶ್ ಹಾಗೂ ದೀಕ್ಷಿತ್ ಅವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಅಂಬ್ಯುಲೆನ್ಸ್ ಮೂಲಕ ಮಂಗಳೂರಿನ ಎ ಜೆ ಆಸ್ಪತ್ರೆಗೆ ಸಾಗಿಸಲಾಗಿದೆಯಾದರೂ ಗಂಭೀರ ಗಾಯಗೊಂಡಿದ್ದ ಕಾರು ಚಾಲಕ ಕಾರ್ತಿಕ್ ಅವರು ರಾತ್ರಿ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















0 comments:
Post a Comment