ಬಂಟ್ವಾಳ, ಅಕ್ಟೋಬರ್ 15, 2025 (ಕರಾವಳಿ ಟೈಮ್ಸ್) : ದುಬೈ ದೇಶದ ಕಂಪೆನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 80 ಸಾವಿರಕ್ಕೂ ಅಧಿಕ ಹಣವನ್ನು ವಂಚಿಸಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಮನೋಜ್ ಶೆಟ್ಟಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ವಿನೀತ್ ಶೆಟ್ಟಿ ಎಂಬಾತ 2025ನೇ ಜೂನ್ ತಿಂಗಳಿನಲ್ಲಿ ಮನೋಜ್ ಶೆಟ್ಟಿಯನ್ನು ಸಂಪರ್ಕಿಸಿ ದುಬೈ ದೇಶದ ಮಾರ್ಗನ್ ಸ್ಟಾನ್ ಲೇ ಕಂಪೆನಿಯಲ್ಲಿ ತನ್ನ ಸಂಬಂಧಿಕರು ಕೆಲಸ ಮಾಡಿಕೊಂಡಿದ್ದು ಅವರ ಮೂಲಕ ಪೈನಾನ್ಸಿಯಲ್ ಎಕ್ಸಿಕ್ಯುಟಿವ್ ಕೆಲಸ ಕೊಡಿಸುವುದಾಗಿ ಆಮೀಷವನ್ನು ಒಡ್ಡಿ, ನಂತರ ವಾಟ್ಸ್ ಅಫ್ ಮೂಲಕ ಸಂಪರ್ಕಿಸಿ ಅವರ ವಿಧ್ಯಾಬ್ಯಾಸದ ದಾಖಲೆಗಳು, ಪಾಸ್ ಪೋರ್ಟ್ ಮತ್ತು ಕೆಲಸದ ದಾಖಲಾತಿಗಳನ್ನು ಕಳುಹಿಸುವಂತೆ ತಿಳಿಸಿದ್ದಾರೆ. ಅದರಂತೆ ಮನೋಜ್ ವಾಟ್ಸ್‍ಅಪ್ ಮೂಲಕ ಕಳುಹಿಸಿರುತ್ತಾರೆ. ನಂತರ ಆರೋಪಿಯು ಕೆಲಸವನ್ನು ಪಡೆದುಕೊಳ್ಳಲು ಪೆÇ್ರಸೆಸ್ ಫಿಸ್ ಆಗಿ 17,650/- ರೂಪಾಯಿ ಪಾವತಿಸಬೇಕು, ಕಮರ್ಶಿಲ್ ಮತ್ತು ಪೈನಾನ್ಸಿಯಲ್ ಸರ್ಟಿಪಿಕೇಟ್ ದೃಡಿಕರಣಕ್ಕಾಗಿ 83,000/- ರೂಪಾಯಿ ಪಾವತಿಸಬೇಕು ಎಂದು ನಂಬಿಸಿದ್ದಾನೆ. ಅದರಂತೆ ಮನೋಜ್ ಶೆಟ್ಟಿ ಆರೋಪಿ ವಿನೀತ್ ಶೆಟ್ಟಿಯ ಮಾತನ್ನು ನಂಬಿ ಜುಲೈ 2ರಂದು 12,850/- ರೂಪಾಯಿ, 4,800/- ರೂಪಾಯಿಗಳಂತೆ ಆರೋಪಿಯ ಮೊಬೈಲ್ ಸಂಖ್ಯೆಗೆ ಗೂಗಲ್ ಪೇ ಮೂಲಕ ಹಣ ಕಳುಹಿಸಿರುತ್ತಾರೆ. ನಂತರ ಕಮರ್ಶಿಯಲ್ ಸರ್ಟಿಫಿಕೇಟ್ ದೃಡಿಕರಣಕ್ಕಾಗಿ 83 ಸಾವಿರ ರೂಪಾಯಿ ನೀಡಬೆಕಿದ್ದು ಅದನ್ನು 2 ದಿನದೊಳಗೆ ಹಿಂದಿರುಗಿಸಲಾಗುತ್ತದೆ ಮತ್ತು ಹಿಂದಿರುಗದಿದ್ದರೆ ನಾನೇ ಪಾವತಿ ಮಾಡುತ್ತೇನೆ ಎಂದು ಆರೋಪಿ ತಿಳಿಸಿದ ಮೇರೆಗೆ ಮನೋಜ್ ಅವರು ಜುಲೈ 7 ರಂದು 60 ಸಾವಿರ ರೂಪಾಯಿ, 13 ಸಾವಿರ ರೂಪಾಯಿ ಮತ್ತು ಜುಲೈ 8 ರಂದು 10 ರೂಪಾಯಿಗಳಂತೆ ಆರೋಪಿಯ ಮೊಬೈಲ್ ಸಂಖ್ಯೆಗೆ ಗೂಗಲ್ ಪೇ ಮೂಲಕ ಹಣ ಕಳುಹಿಸಿರುತ್ತಾರೆ.
ನಂತರ ಆರೋಪಿಯು ಮನೋಜ್ ಶೆಟ್ಟಿಗೆ ಕೆಲಸದ ವಿಚಾರದ ಬಗ್ಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ ಮತ್ತು ಪೆÇೀನ್, ಮೆಸೇಜುಗಳನ್ನು ತಿರಸ್ಕರಿಸಲು ಪ್ರಾರಂಬಿಸಿರುತ್ತಾನೆ. ನಂತರ ಆರೋಪಿಯು ಅಕ್ಟೋಬರ್ 10 ರಂದು 20 ಸಾವಿರ ರೂಪಾಯಿ ಹಣವನ್ನು ಮನೋಜ್ ಶೆಟ್ಟಿಗೆ ಗೂಗಲ್ ಪೇ ಮೂಲಕ ಹಿಂತಿರುಗಿಸಿ, ಉಳಿದ 80,650/- ರೂಪಾಯಿ ಹಣವನ್ನು ಹಿಂತಿರುಗಿಸದೇ ಮೋಸ ವಂಚನೆ ಮಾಡಿರುತ್ತಾನೆ ಎಂದು ನೀಡಿರುವ ದೂರಿನಂತೆ ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 149/2025 ಕಲಂ 318(2), 318(4) ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿದೆ.














0 comments:
Post a Comment