ಪುತ್ತೂರು, ಅಕ್ಟೋಬರ್ 06, 2025 (ಕರಾವಳಿ ಟೈಮ್ಸ್) : ಡಿ ಸಿ ಮನ್ನಾ ಉಳಿಕೆ ಜಮೀನನ್ನು ನಿವೇಶನ ರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಂಜೂರು ಮಾಡಲು ಸರಕಾರಕ್ಕೆ ಆಗ್ರಹಿಸುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ದ ಕ ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮನವಿ ಮಾಡಿದೆ.
ಶಾಸಕರನ್ನು ಭೇಟಿಯಾದ ನಿಯೋಗ ಈ ವಿಚಾರದಲ್ಲಿ ನಾವು ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಆದರೆ ಇದುವರೆಗೂ ಯಾವ ಜನಪ್ರತಿನಿಧಿಗಳೂ ನಮ್ಮ ಬೆಂಬಲಕ್ಕೆ ಬಂದಿಲ್ಲ. ಈ ಬಾರಿ ನಿಮ್ಮ ಮೂಲಕ ನಾವು ಮನವಿ ಮಾಡಿ ಮುಖ್ಯಮಂತ್ರಿಗಳನ್ನೂ ಭೇಟಿಯಾಗಿ ಚರ್ಚೆ ನಡೆಸಿ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಸಂಘಟನೆಯ ಪ್ರಮುಖರಾದ ಸರೋಜಿನಿ ಬಂಟ್ವಾಳ, ರಘು ಎಕ್ಕಶರ್, ಅಶೋಕ್ ಕೊಂಚಾಡಿ, ಕೃಷ್ಣಾನಂದ, ನಾಗೇಶ್ ಬಲ್ಮಠ, ಸದಾಶಿವ ಪಡುಬಿದ್ರಿ, ಎಚ್ ಡಿ ಲೋಹಿತ್, ರುಕ್ಕಯ್ಯ ಅಮೀನ್ ಕರಂಬಾರ್, ಶ್ರೀಧರ್ ಕೇಪುಳು, ರಾಮಣ್ಣ ಪಿಲಿಂಜ, ಗಣೇಶ್ ಕಾರೆಕ್ಕಾಡು, ವಿಶ್ವನಾಥ ಪುಂಚತ್ತಾರು, ಬಾಬು ಸವಣೂರು, ನಾಗೇಶ್ ಕುರಿಯ ಉಪಸ್ಥಿತರಿದ್ದರು.













0 comments:
Post a Comment