ಬಂಟ್ವಾಳ, ಅಕ್ಟೋಬರ್ 24, 2025 (ಕರಾವಳಿ ಟೈಮ್ಸ್) : ಶೈಖುನಾ ಮಿತ್ತಬೈಲು ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ (ಖ.ಸಿ.) ಅವರ 7ನೇ ಆಂಡ್ ನೇರ್ಚೆ (ಉರೂಸ್ ಮುಬಾರಕ್) ಕಾರ್ಯಕ್ರಮಕ್ಕೆ ಶುಕ್ರವಾರ ರಾತ್ರಿ ಮಿತ್ತಬೈಲು ನಕ್ಷಬಂಧೀ ನಗರದಲ್ಲಿ ಚಾಲನೆ ದೊರೆಯಿತು.
ಮಗ್ರಿಬ್ ನಮಾಝ್ ಬಳಿಕ ಉಸ್ತಾದ್ ಹಕೀಂ ಯಮಾನಿ ಮಿತ್ತಬೈಲು ಅವರ ನೇತೃತ್ವದಲ್ಲಿ ಮಜ್ಲಿಸುನ್ನೂರ್ ಕಾರ್ಯಕ್ರಮ ನಡೆಯಿತು. ಸಯ್ಯಿದ್ ಅಮೀರ್ ತಂಙಳ್ ಕಿನ್ಯ ಅವರು ದುವಾ ನೆರವೇರಿಸಿದರು. ಸಯ್ಯಿದ್ ಬಾಸಿತ್ ಬಾಅಲವಿ ಅಲ್-ಅನ್ಸಾರಿ ತಂಙಳ್ ಕುಕ್ಕಾಜೆ ಸಂದಲ್ ಮೆರವಣಿಗೆಯ ನೇತೃತ್ವ ವಹಿಸಿದ್ದರು.
ಮಿತ್ತಬೈಲು ಉಸ್ತಾದರ ಸುಪುತ್ರ ಇರ್ಶಾದ್ ದಾರಿಮಿ ಅಲ್-ಜಝರಿ ಅವರ ಮುಂದಾಳುತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಬೂಬಕ್ಕರ್ ಅನ್ಸಾರಿ ಮಿತ್ತಬೈಲು, ಹಾಶಿಂ ಅರ್ಶದಿ ಮಿತ್ತಬೈಲು, ಫಾರೂಕ್ ಫೈಝಿ ಪೈವಳಿಕೆ, ನಾಸಿರ್ ಫೈಝಿ ಕಿಲ್ತಾನ್, ಅಬ್ದುರ್ರಹ್ಮಾನ್ ಅನ್ಸಾರಿ ಮಿತ್ತಬೈಲು, ಕಾಸಿಂ ದಾರಿಮಿ ನಂದಾವರ, ಸಾಗರ್ ಮುಹಮ್ಮದ್ ಹಾಜಿ, ಯೂಸುಫ್ ಕರಂದಾಡಿ, ಖಾದರ್ ಮಾಸ್ಟರ್ ಬಂಟ್ವಾಳ ಮೊದಲಾದವರು ಭಾಗವಹಿಸಿದ್ದರು.
ಬಳಿಕ ನಕ್ಷಬಂಧೀ ನಗರದಿಂದ ಮಿತ್ತಬೈಲು ಉಸ್ತಾದರ ಮಕ್ ಬರ ವರೆಗೆ ಸಂದಲ್ ಮೆರವರಣಿಗೆ ನಡೆಯಿತು. ಫಾರೂಕ್ ಮಿತ್ತಬೈಲು ನೇತೃತ್ವದ ಶಂಸುಲ್ ಉಲಮಾ ದಫ್ ತಂಡದ ಸದಸ್ಯರು ಹಾಗೂ ಲಕ್ಷದ್ವೀಪದ ರಿಫಾಯಿ ರಾತೀಬ್ ತಂಡದಿಂದ ದಫ್ ಪ್ರದರ್ಶನ ನಡೆಯಿತು.
ಅ 25 ರಂದು ಶನಿವಾರ ಸುಬುಹಿ ನಮಾಝ್ ಬಳಿಕ ಉಸ್ತಾದ್ ಮಕ್ ಬರ ಬಳಿ ಖತಮುಲ್ ಕುರ್ ಆನ್ ಪಾರಾಯಣ, ಬೆಳಿಗ್ಗೆ 10 ಗಂಟೆಗೆ ಹಖೀಖತ್ ಮಾಲ, ಜಝೀರತ್ ಮಾಲ, ಲುಹ್ರ್ ನಮಾಝ್ ಬಳಿಕ ಶೈಖುನಾ ಬೆಳ್ಳೂರು ಉಸ್ತಾದ್ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನಡೆಯಲಿದ್ದು, ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್ ಉಪಸ್ಥಿತರಿರುವರು. ಬಳಿಕ ಅನ್ನದಾನ ನಡೆಯಲಿದೆ.





























0 comments:
Post a Comment