ಬಂಟ್ವಾಳ, ಅಕ್ಟೋಬರ್ 24, 2025 (ಕರಾವಳಿ ಟೈಮ್ಸ್) : ಮುಖ್ಯ ರಸ್ತೆ ಕ್ರಾಸ್ ಮಾಡಲು ನಿಂತಿದ್ದ ವೇಳೆ ಸ್ಕೂಟರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಎರಡೂ ದ್ವಿಚಕ್ರ ವಾಹನಗಳ ಸವಾರರು ಗಾಯಗೊಂಡ ಘಟನೆ ಬಾಳ್ತಿಲ ಗ್ರಾಮದ ಪೂರ್ಲಿಪ್ಪಾಡಿ ಜಂಕ್ಷನ್ನಿನಲ್ಲಿ ಅ 23 ರಂದು ಸಂಭವಿಸಿದೆ.
ವಿಠಲ ಪ್ರಭು ಎಂಬವರು ಸ್ಕೂಟರಿನಲ್ಲಿ ಪೂರ್ಲಿಪ್ಪಾಡಿ ಜಂಕ್ಷನ್ನಿನಲ್ಲಿ ಮುಖ್ಯ ರಸ್ತೆ ಕ್ರಾಸ್ ಮಾಡಲು ನಿಂತಿದ್ದ ವೇಳೆ ಮಾಣಿ ಕಡೆಯಿಂದ ಬಂದ ಬೈಕ್ ಸವಾರ ದುಡುಕುತನ ಹಾಗೂ ನಿರ್ಲಕ್ಷ್ಯತನದ ಚಾಲನೆ ಮಾಡಿಕೊಂಡು ಬಂದು ಸ್ಕೂಟರಿಗೆ ಡಿಕ್ಕಿ ಹೊಡೆದಿದ್ದಾನೆ.
ಅಪಘಾತದಿಂದ ಸ್ಕೂಟರ್ ಹಾಗೂ ಬೈಕ್ ಸವಾರರಿಬ್ಬರೂ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಗೊಂಡ ಸ್ಕೂಟರ್ ಸವಾರ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಾದರೆ, ಬೈಕ್ ಸವಾರ ಕಲ್ಲಡ್ಕದ ಪುಷ್ಪರಾಜ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಬಾಳ್ತಿಲ ನಿವಾಸಿ ಬಾಲಚಂದ್ರ ನಾಯಕ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















0 comments:
Post a Comment