ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಅಗತ್ಯ : ನಿವೃತ್ತ ಪೊಲೀಸ್ ಅಧಿಕಾರಿ ಕುಶಾಲಪ್ಪ ಕರೆ - Karavali Times ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಅಗತ್ಯ : ನಿವೃತ್ತ ಪೊಲೀಸ್ ಅಧಿಕಾರಿ ಕುಶಾಲಪ್ಪ ಕರೆ - Karavali Times

728x90

29 October 2025

ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಅಗತ್ಯ : ನಿವೃತ್ತ ಪೊಲೀಸ್ ಅಧಿಕಾರಿ ಕುಶಾಲಪ್ಪ ಕರೆ

ಬಂಟ್ವಾಳ, ಅಕ್ಟೋಬರ್ 29, 2025 (ಕರಾವಳಿ ಟೈಮ್ಸ್) : ಐಎಎಸ್, ಐಪಿಎಸ್ ಆಗಲು ವಿದ್ಯಾರ್ಥಿಗಳು ಆಸಕ್ತಿ ತೋರಿಸಬೇಕು, ಪ್ರತಿಭಾವಂತ ವಿದ್ತಾರ್ಥಿಗಳಿಗೆ ಮುಂದಿನ ಉನ್ನತ ಶಿಕ್ಷಣದ ಬಗ್ಗೆ ಮಾಹಿತಿ ಕೊಡಬೇಕು, ಅಷ್ಟೇ ಅಲ್ಲದೇ ಉನ್ನತ ಶಿಕ್ಷಣಕ್ಕೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣದ ಯಾವುದೇ ಸಮಸ್ಯೆ ಬಾರದಂತೆ ಅವರಿಗೆ ಬೇಕಾಗುವ ಹಣದ ಕ್ರೋಡೀಕರಣದ ಅಗತ್ಯ ಇದ್ದು ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಕೊಡಗು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ, ನಿವೃತ್ತ ಪೆÇಲೀಸ್ ಅಧಿಕಾರಿ ಕುಶಾಲಪ್ಪ ಮೂಲ್ಯ ತಿಳಿಸಿದರು.

ಬಿ ಸಿ ರೋಡಿನ ಫೆÇಸಳ್ಳಿ  ಸಮುದಾಯ ಭವನದಲ್ಲಿ ಅ 26 ರಂದು ನಡೆದ ಬಂಟ್ವಾಳ ತಾಲೂಕು ಕುಲಾಲ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದ ಕ ಜಿಲ್ಲಾ ಕುಲಾಲ ಕುಂಬಾರ ಯುವವೇದಿಕೆಯ ಅಧ್ಯಕ್ಷ ಲಯನ್ ಅನಿಲ್ ದಾಸ್ ಅವರು ಬಂಟ್ವಾಳ ತಾಲೂಕು ಕುಲಾಲ ಸಂಘದ ವೆಬ್ ಸೈಟ್ ಲೋಕಾರ್ಪಣೆ ಮಾಡಿದ 

ಇದೇ ವೇಳೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 11 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. 39 ಮಂದಿ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹ ವಿದ್ಯಾರ್ಥಿ ವೇತನ ಮತ್ತು ಬಡ ಕುಟುಂಬದ  ಪ್ರತಿಭಾವಂತ 59 ಮಂದಿ  ವಿದ್ಯಾರ್ಥಿಗಳಿಗೆ ನಿರಂತರ ವಿದ್ಯಾರ್ಥಿ ವೇತನ ವಿತರಿಲಸಾಯಿತು. ಏಷ್ಯಾ ಡೆಫ್ ರಾಪಿಡ್ ಚಾಂಪಿಯನ್ ಚೆಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಅಂತಾರಾಷ್ಟ್ರೀಯ ಚೆಸ್ ಆಟಗಾರ್ತಿ ಯಶಸ್ವಿ ಕುಲಾಲ್ ಅವರನ್ಮು ಸನ್ಮಾನಿಸಲಾಯಿತು. 

ಮುಖ್ಯ ಅತಿಥಿಗಳಾಗಿ ನಾಸಿಕ್ ಹೊಟೇಲ್ ಉದ್ಯಮಿ ಗಣೇಶ್ ಬಂಗೇರ ಭಂಡಾರಿಬೆಟ್ಟು, ಪದ್ಮಿನಿ ದೇವಣ್ಣ, ಉದ್ಯಮಿ ದಯಾ ಯೋಗೀಶ್, ಸಿದ್ದಕಟ್ಟೆ ಸರಕಾರಿ ಪದವಿ ಕಾಲೇಜು ಸಹಪ್ರಾಧ್ಯಾಪಕ ಡಾ ಅಭಿನಂದನ್ ಕುಲಾಲ್, ಮಂಗಳೂರು ವಿಶ್ವವಿದ್ಯಾನಿಲಯ ನೆಲ್ಯಾಡಿ ಘಟಕ ಕಾಲೇಜು ಉಪನ್ಯಾಸಕ ಡಾ ಆನಂದ್ ಎಂ ಕಿದೂರು, ಹಿರಿಯ ವರದಿಗಾರ ವಿನೋದ್ ಪುದು, ಮಂಗಳೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ನಾವೂರು ಭಾಗವಹಿಸಿದ್ದರು. 

ಉಪಾಧ್ಯಕ್ಷೆ ಜಲಜಾಕ್ಷಿ ಕುಲಾಲ್, ಮೀನಾಕ್ಷಿ, ಪ್ರೇಮ ಪೊಸಳ್ಳಿ, ಸುಶೀಲಾ, ಗಣೇಶ್ ನರಿಕೊಂಬು, ಸತೀಶ್ ಸಂಪಾಜೆ, ತಾರನಾಥ ಮೊಡಂಕಾಪು, ರಾಘವೇಂದ್ರ ರಮೇಶ್ ಸಾಲ್ಯಾನ್ ಕೈಕುಂಜೆ ಅವರು ಪುರಸ್ಕಾರ ಪಡೆದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಮತ್ತು ಪ್ರೇಮ ಪೆÇಸಳ್ಳಿ, ನಿರಂತರ ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳ ಹೆಸರನ್ನು ಸುಶೀಲಾ, ಗಣೇಶ್ ನರಿಕೊಂಬು, ಸತೀಶ್ ಸಂಪಾಜೆ,  ತಾರನಾಥ ಮೊಡಂಕಾಪು ಮತ್ತು  ರಾಘವೇಂದ್ರ, £ರಂತರ ವಿದ್ಯಾರ್ಥಿ ವೇತನದ ವಿದ್ಯಾರ್ಥಿಗಳ ಹೆಸರನ್ನು ರಮೇಶ್ ಸಾಲ್ಯಾನ್ ಕೈಕುಂಜೆ ವಾಚಿಸಿದರು. ಪ್ರೇಮನಾಥ ನೇರಂಬೋಳು ಹಾಗೂ ಚಿರಾಗ್ ಕಾಮಾಜೆ ಅವರು ವೆಬ್ ಸೈಟ್ ಬಗ್ಗೆ ಮಾಹಿತಿ ನೀಡಿದರು. 

ಸುರೇಶ್ ಕುಲಾಲ್ ಬಂಟ್ವಾಳ, ದೇವದಾಸ ಅಗ್ರಬೈಲು, ಗಣೇಶ್ ಬೆದ್ರಗುಡ್ಡೆ, ರಾಧಾಕೃಷ್ಣ ಬಂಟ್ವಾಳ, ಮಚ್ಚೇಂದ್ರ ಸಾಲ್ಯಾನ್, ರಾಜೇಶ್ ರಾಯಿ, ಯೋಗೀಶ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು. 

ಪ್ರಧಾನ ಕಾರ್ಯದರ್ಶಿ ಯಾದವ ಕುಲಾಲ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕೋಶಾಧಿಕಾರಿ ಸೋಮನಾಥ ಸಾಲ್ಯಾನ್ ವಂದಿಸಿದರು. ಜಯಂತ ಅಗ್ರಬೈಲು ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಅಗತ್ಯ : ನಿವೃತ್ತ ಪೊಲೀಸ್ ಅಧಿಕಾರಿ ಕುಶಾಲಪ್ಪ ಕರೆ Rating: 5 Reviewed By: karavali Times
Scroll to Top