ಬೆಳ್ತಂಗಡಿ, ಅಕ್ಟೋಬರ್ 26, 2025 (ಕರಾವಳಿ ಟೈಮ್ಸ್) : ಮಹೇಶ್ ಶೆಟ್ಟಿ ತಿಮರೋಡಿ ಪರ ಅ 27 ರಂದು ಬೆಳ್ತಂಗಡಿಯಲ್ಲಿ ಹಿಂದೂ ಜಾಗರಣ ವೇದಿಕೆ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ.
ಅ 27 ರಂದು ಮಹೇಶ್ ಶೆಟ್ಟಿ ತಿಮರೋಡಿ ಪರವಾಗಿ ಪ್ರತಿಭಟನೆ ನಡೆಸಲು ಬೆಳ್ತಂಗಡಿ ತಾಲೂಕು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಅನಿಲ್ ಕುಮಾರ್ ಅಂತರ ಅವರು ಅನುಮತಿ ಪೊಲೀಸ್ ಇಲಾಖೆಯ ಅನುಮತಿ ಕೇಳಿದ್ದರು.
ಆದರೆ ಈ ವಿಷಯಕ್ಕೆ ಸಂಬಂಧಿಸಿದ ಪ್ರಕರಣ ಉಚ್ಚ ನ್ಯಾಯಾಲಯದಲ್ಲಿ (ರಿಟ್ ಪಿಟಿಷನ್ ಸಂಖ್ಯೆ : 30021/2025) ವಿಚಾರಣೆಯಲ್ಲಿರುವುದರಿಂದ, ಪ್ರತಿಭಟನೆಗೆ ಪೆÇಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ. ಇಲಾಖಾ ಸೂಚನೆ ಉಲ್ಲಂಘಿಸಿದರೆ, ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.
























0 comments:
Post a Comment