ಪೂಂಜಾಲಕಟ್ಟೆ : ಕುಡಿತದ ಚಟಕ್ಕೆ ಬಿದ್ದಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ - Karavali Times ಪೂಂಜಾಲಕಟ್ಟೆ : ಕುಡಿತದ ಚಟಕ್ಕೆ ಬಿದ್ದಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ - Karavali Times

728x90

6 October 2025

ಪೂಂಜಾಲಕಟ್ಟೆ : ಕುಡಿತದ ಚಟಕ್ಕೆ ಬಿದ್ದಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ

ಬಂಟ್ವಾಳ, ಅಕ್ಟೋಬರ್ 06, 2025 (ಕರಾವಳಿ ಟೈಮ್ಸ್) : ವಿಪರೀತ ಕುಡಿತದ ಚಟಕ್ಕೆ ಬಲಿ ಬಿದ್ದಿದ್ದ ಯುವಕನೋರ್ವ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾಲಾಡಿ ಗ್ರಾಮದ ಕೊಡೈಲು ಎಂಬಲ್ಲಿ ಅ 5 ರಂದು ಸಂಭವಿಸಿದೆ. 

ಮೃತ ಯುವಕನನ್ನು ಇಲ್ಲಿನ ನಿವಾಸಿ ದಿವಂಗತ ದಾಮೋದರ ಪೂಜಾರಿ ಎಂಬವರ ಪುತ್ರ ಸುನಿಲ್ ಎಂದು ಹೆಸರಿಸಲಾಗಿದೆ. ಈತನ ತಂದೆ ದಾಮೋದರ ಪೂಜಾರಿ ಅವರು 2 ವರ್ಷದ ಹಿಂದೆ ಅಸೌಖ್ಯದಿಂದ ಮೃತಪಟ್ಟಿದ್ದರು. ಬಳಿಕ ಮನೆಯಲ್ಲಿ ತಾಯಿಯ ಜೊತೆ ವಾಸವಾಗಿದ್ದ ಸುನಿಲ್ ವಿಪರೀತ ಕುಡಿತದ ಚಟ ಬೆಳೆಸಿಕೊಂಡು ಅಲೆದಾಡುತ್ತಿದ್ದು, ಮನೆಗೂ ಸರಿಯಾಗಿ ಬಾರದೆ ಕಳೆದ 9-10 ದಿನಗಳಿಂದ ಯಾರಿಗೂ ನೋಡಲು ಸಿಕ್ಕಿರುವುದಿಲ್ಲ. ಅ 5 ರಂದು ಮಾಲಾಡಿ ಗ್ರಾಮದ ಕೊಡೈಲು ಎಂಬಲ್ಲಿನ ಕಾಡಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸಂಬಂಧಿ ಹರೀಶ್ ಕುಮಾರ್ ಅವರ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಪೂಂಜಾಲಕಟ್ಟೆ : ಕುಡಿತದ ಚಟಕ್ಕೆ ಬಿದ್ದಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ Rating: 5 Reviewed By: karavali Times
Scroll to Top