ಬಂಟ್ವಾಳ, ನವೆಂಬರ್ 03, 2025 (ಕರಾವಳಿ ಟೈಮ್ಸ್) : ಬೈಕ್ ಡಿಕ್ಕಿ ಹೊಡೆದು ಪಾದಚಾರಿ ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ಕೊಳಕೆ ಮಸೀದಿ ಬಳಿ ನ 1 ರಂದು ಅಪರಾಹ್ನ ವೇಳೆ ಸಂಭವಿಸಿದೆ.
ಗಾಯಾಳು ಪಾದಚಾರಿಯನ್ನು ಅಬ್ದುಲ್ ಮಜೀದ್ ಎಂದು ಹೆಸರಿಸಲಾಗಿದೆ. ಇವರು ನ 1 ರಂದು ಅಪರಾಹ್ನ 2 ಗಂಟೆ ವೇಳೆಗೆ ಕೊಳಕೆ ಮಸೀದಿ ಕಡೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೋರುಗುಡ್ಡೆ-ಕೊಳಕೆ ರಸ್ತೆಯಲ್ಲಿ ಬೋರುಗುಡ್ಡೆ ಕಡೆಯಿಂದ ಸಿರಾಜ್ ಎಂಬವರು ಚಲಾಯಿಸಿಕೊಂಡು ಬಂದ ಬೈಕ್ ಹಿಬಂದಿಯಿಂದ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ರಸ್ತೆಗೆ ಬಿದ್ದ ಮಜೀದ್ ಅವರ ಬಲಕಾಲಿನ ಪಾದಕ್ಕೆ ಗಾಯವಾಗಿದ್ದು, ಅವರನ್ನು ಮಂಗಳೂರಿನ ಜನಪ್ರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












0 comments:
Post a Comment