ಬಂಟ್ವಾಳ, ನವೆಂಬರ್ 21, 2025 (ಕರಾವಳಿ ಟೈಮ್ಸ್) : ಸಜಿಪಮೂಡ ಗ್ರಾಮ ಪಂಚಾಯತ್ ಸದಸ್ಯ, ಬಂಟ್ವಾಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ, ಸಜಿಪಮೂಡ ವಲಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ, ಬೊಳ್ಳಾಯಿ ನಿವಾಸಿ ಎನ್ ಅಬ್ದುಲ್ ಕರೀಂ (51) ಎಂಬವರಿಗೆ ಪಂಚಾಯತ್ ಉಪಾಧ್ಯಕ್ಷೆಯ ಪತಿಯೇ ರಸ್ತೆ ಮಧ್ಯೆ ತಡೆದು ನಿಲ್ಲಿಸಿ ಗಂಭೀರ ಹಲ್ಲೆ ನಡೆಸಿ, ಜೀವಬೆದರಿಕೆ ಒಡ್ಡಿದ ಘಟನೆ ನ 20 ರಂದು ಮಧ್ಯಾಹ್ನ ಬೊಳ್ಳಾಯಿ ಜಂಕ್ಷನ್ನಿನಲ್ಲಿ ನಡೆದಿದ್ದು, ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ನಡೆಸಿದ ಆರೋಪಿಯನ್ನು ಬೊಳ್ಳಾಯಿ-ಪಟ್ಟುಗುಡ್ಡೆ ನಿವಾಸಿ ರಿಯಾಝ್ (40) ಎಂದು ಹೆಸರಿಸಲಾಗಿದೆ. ಈತ ಸಜಿಪಮೂಡ ಗ್ರಾಮ ಪಂಚಾಯತ್ ಉಪಾಧ್ಯಕ್ಷೆಯ ಪತಿ ಎಂದು ತಿಳಿದು ಬಂದಿದೆ. ಪಂಚಾಯತ್ ನೀರಿನ ಬಿಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿ ನ 15 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಫೌಝಿಯಾ ಹಾಗೂ ಸದಸ್ಯ ಅಬ್ದುಲ್ ಕರೀಂ ಅವರ ಮಧ್ಯೆ ಮಾತಿನ ವಿನಿಮಯ ನಡೆದಿದೆ ಎನ್ನಲಾಗಿದೆ. ಇದೇ ಕಾರಣವನ್ನು ಮುಂದಿಟ್ಟು ಪಂಚಾಯತ್ ಉಪಾಧ್ಯಕ್ಷೆಯ ಪತಿ ರಿಯಾಝ್ ಎಂಬಾತ ನ 20 ರಂದು ಮಧ್ಯಾಹ್ನ 1.30ರ ವೇಳೆಗೆ ಸಜಿಪಮೂಡ ಗ್ರಾಮದ ಬೊಳ್ಳಾಯಿ ಜಂಕ್ಷನ್ನಿನಲ್ಲಿ ಕರೀಂ ಅವರು ಸ್ಕೂಟರಿನಲ್ಲಿ ಹೋಗುತ್ತಿದ್ದ ಸಂದರ್ಭ ತಡೆದು ನಿಲ್ಲಿಸಿ ಸ್ಕೂಟರಿಗೆ ಕಾಲಿನಿಂದ ತುಳಿದು ಸ್ಕೂಟರನ್ನು ಕೆಳಗೆ ಬೀಳಿಸಿ ಕೈಯಿಂದ ಎದೆಗೆ ಹೊಡೆದಿದ್ದಾನೆ. ಕಾಲಿನಿಂದ ತುಳಿದು, ಕೆನ್ನೆಗೆ ಹೊಡೆದು ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿರುತ್ತಾನೆ.
ಹಲ್ಲೆಯಿಂದ ಗಾಯಗೊಂಡಿರುವ ಕರೀಂ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾಝ್ ಅವರು ಕೂಡಾ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ.














0 comments:
Post a Comment