ಪುತ್ತೂರು, ನವೆಂಬರ್ 12, 2025 (ಕರಾವಳಿ ಟೈಮ್ಸ್) : ಮದ್ಯಪಾನ ನಡೆಸಿ ಕಾರು ಚಾಲನೆ ನಡೆಸಿದ ಪರಿಣಾಮ ಸ್ಕೂಟರಿಗೆ ಡಿಕ್ಕಿ ಹೊಡೆದು ಸವಾರ ಗಾಯಗೊಂಡ ಘಟನೆ ಕಬಕ ಗ್ರಾಮದ ಪೋಳ್ಯ ಎಂಬಲ್ಲಿ ನ 11 ರಂದು ಸಂಜೆ ಸಂಭವಿಸಿದೆ.
ಗಾಯಗೊಂಡ ಸ್ಕೂಟರ್ ಸವಾರನನ್ನು ಶಶಿಕುಮಾರ್ ಎಂದು ಹೆಸರಿಸಲಾಗಿದ್ದು, ಆರೋಪಿ ಕಾರು ಚಾಲಕನನ್ನು ಪುತ್ತೂರು ತಾಲೂಕು ಕೊಡಿಪ್ಪಾಡಿ ನಿವಾಸಿ ಮಹಮ್ಮದ್ ತೌಫೀಕ್ (29) ಎಂದು ಗುರುತಿಸಲಾಗಿದೆ.
ನವೆಂಬರ್ 11 ರಂದು ಸಂಜೆ ಆರೋಪಿ ಕಾರು ಚಾಲಕ ಮಹಮ್ಮದ್ ತೌಫಿಕ್ ಎಂಬಾತ ಕೆಎ04 ಎಂಟಿ2455 ನೋಂದಣಿ ಸಂಖ್ಯೆಯ ಕಾರನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ, ಕಬಕ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ಕಬಕ ಗ್ರಾಮದ, ಪೆÇೀಳ್ಯ ಎಂಬಲ್ಲಿ ಕಾರನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಆರೋಪಿಯ ಕಾರಿನ ಮುಂದೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಶಶಿಕುಮಾರ್ ಅವರು ಸವಾರಿ ಮಾಡುತ್ತಿದ್ದ ಕೆಎ21 ಇಬಿ8634 ನೋಂದಣಿ ಸಂಖ್ಯೆಯ ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ಪರಿಣಾಮ ಶಶಿಕುಮಾರ್ ಅವರು ರಸ್ತೆಗೆ ಬಿದ್ದು, ಗಾಯಗೊಂಡಿದ್ದು, ಅವರನ್ನು ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಆರೋಪಿ ಕಾರು ಚಾಲಕ ಮಹಮ್ಮದ್ ತೌಪೀಕ್ ಅಪಘಾತ ನಡೆದ ವೇಳೆ, ಮದ್ಯಪಾನ ಮಾಡಿರುವುದು ವೈದ್ಯಕೀಯ ತಪಾಸಣೆಯ ವೇಳೆ ಧೃಢಪಟ್ಟಿರುತ್ತದೆ ಹಾಗೂ ಇದೇ ವರ್ಷದಲ್ಲಿ ನಡೆದ ಇನ್ನೊಂದು ಅಪಘಾತ ಪ್ರಕರಣದಲ್ಲಿ ಸದ್ರಿ ಆರೋಪಿಯು ನಿರ್ಲಕ್ಷತನದಲ್ಲಿ ವಾಹನ ಚಾಲನೆ ನಡೆಸಿದ ಪರಿಣಾಮ ಅಪಘಾತ ನಡೆದು ವ್ಯಕ್ತಿಯೊಬ್ಬರು ಮೃತಪಟ್ಟಿರುತ್ತಾರೆ. ಈ ಹಿನ್ನೆಲೆಯಲ್ಲಿ ಅರೋಪಿಯ ವಿರುದ್ಧ ಪುತ್ತೂರು ಸಂಚಾರ ಪೆÇಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಕ್ರಮಾಂಕ 142/2025 ಪ್ರಕರಣದಲ್ಲಿ, ಕಲಂ 110 ಬಿ ಎನ್ ಎಸ್ ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.















0 comments:
Post a Comment