ಮಂಗಳೂರು, ನವೆಂಬರ್ 26, 2025 (ಕರಾವಳಿ ಟೈಮ್ಸ್) : ಉಳ್ಳಾಲ ಖಾಝಿಗಳೂ ಪ್ರಮುಖ ಧಾರ್ಮಿಕ ವಿದ್ವಾಂಸರೂ ಆಗಿದ್ದ ಮರ್ ಹೂಂ ಸಯ್ಯಿದ್ ಕೂರತ್ ತಂಙಳ್ ಅವರ ಅನುಸ್ಮರಣೆ ಪ್ರಯುಕ್ತ ಎನರ್ಜಿಯಾ ಎಂಟಿಸಿ, ಸೌದಿ ಅರೇಬಿಯಾ ಸಿಇಓ, ಯುವ ಉದ್ಯಮಿ ಹಸನ್ ಶಾಹಿದ್ ಅವರ ಎನರ್ಜಿಯಾ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ತಾಜುಲ್ ಉಲಮಾ ಹೆಲ್ಪ್ ವಿಂಗ್ ಖುರ್ರತುಸ್ಸಾದಾತ್ ಮೆಮೋರಿಯಲ್ ಫೌಂಡೇಶನ್ (ರಿ) ವತಿಯಿಂದ ನೂತನ ಆಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ಬುಧವಾರ ಮಂಗಳೂರಿನಲ್ಲಿ ನಡೆಯಿತು.
ಸಯ್ಯಿದ್ ಮಶ್-ಊದ್ ತಂಙಳ್ ಅಲ್-ಬುಖಾರಿ ಕೂರತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾ ಸ್ಪೀಕರ್ ಡಾ ಹಾಜಿ ಯು ಟಿ ಖಾದರ್ ಅಂಬ್ಯುಲೆನ್ಸ್ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಎಸ್ ಎಂ ರಶೀದ್ ಹಾಜಿ ಉಪಸ್ಥಿತರಿದ್ದರು. ಹೆಲ್ಪ್ ವಿಂಗ್ ಅಧ್ಯಕ್ಷ ಖಾಲಿದ್ ಹಾಜಿ ಸ್ವಾಗತಿಸಿದರು.














0 comments:
Post a Comment