ಮಂಗಳೂರು, ನವೆಂಬರ್ 06, 2025 (ಕರಾವಳಿ ಟೈಮ್ಸ್) : ಕುಡ್ಲ ಕುಲಾಲೆರ್ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ) ದ ಕ ಜಿಲ್ಲೆ ಇದರ ಅಧ್ಯಕ್ಷರಾಗಿ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ (ಬುಡಾ) ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ಆಯ್ಕೆಯಾಗಿದ್ದಾರೆ.
ನವೆಂಬರ್ 1 ರಂದು ಮಂಗಳೂರಿನಲ್ಲಿ ನಡೆದ ಟ್ರಸ್ಟ್ ಪ್ರಥಮ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಉಪಾಧ್ಯಕ್ಷರಾಗಿ ಮಂಗಳೂರು ಮೆಸ್ಕಾಂ ನಿವೃತ್ತ ಎಂ ಡಿ ಮಂಜಪ್ಪ ಬಿಜೈ, ಮಂಗಳೂರು ಮನಪಾ ಮಾಜಿ ಉಪಮೇಯರ್ ರಾಜೇಂದ್ರ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ನಿವೃತ್ತ ಮುಖ್ಯೋಪಾಧ್ಯಾಯ ಟಿ ಸೇಸಪ್ಪ ಮೂಲ್ಯ, ಕೋಶಾಧಿಕಾರಿಯಾಗಿ ನಿವೃತ್ತ ಆದಾಯ ತೆರಿಗೆ ಇಲಾಖಾಧಿಕಾರಿ ವಿಶ್ವನಾಥ ಬಂಗೇರ ಕುಳಾಯಿ, ಟ್ರಸ್ಟಿಗಳಾಗಿ ಪೃಥ್ವಿರಾಜ್ ಆರ್ ಕೆ ಎಡಪದವು, ಸೋಮಯ್ಯ ಹನೈನಡೆ ಬೆಳ್ತಂಗಡಿ, ಸುಂದರ ಬಂಗೇರ ಆದ್ಯಪಾಡಿ, ಗಿರೀಶ್ ಎಂ ಪಿ ಕುತ್ತಾರು, ಚಂದ್ರಹಾಸ ಪಲ್ಲಿಪ್ಪಾಡಿ, ಭಾಸ್ಕರ ಎಂ ಪೆರುವಾಯಿ, ದೇವಪ್ಪ ಕುಲಾಲ್ ಪಂಜಿಕಲ್ಲು, ರಮೇಶ್ ಬಾಳೆಹಿತ್ಲು ಬೆಂಗಳೂರು, ಉಮೇಶ್ ಕೆ ಬೆಂಗಳೂರು, ದಯಾನಂದ ಬಂಟ್ವಾಳ, ಭಾಸ್ಕರ ಅಜೆಕಳ ಅವರನ್ನು ಆರಿಸಲಾಗಿದೆ.
ಕುಲಾಲ ಸಮುದಾಯದ ಯುವಕ-ಯುವತಿಯರಿಗೆ ಉದ್ಯೋಗ ಮಾಹಿತಿ ಶಿಬಿರ, ಉದ್ಯೋಗ ಆಧಾರಿತ ಶಿಕ್ಷಣ, ಲೋಕಸೇವಾ ಆಯೋಗದ ಪರೀಕ್ಷಾ ಸಿದ್ದತೆ, ತಾಂತ್ರಿಕ ನುರಿತ ಯುವ ಸಮೂಹಕ್ಕೆ ವಿದೇಶದಲ್ಲಿ ಉದ್ಯೋಗ ದೊರೆಯುವ ಬಗ್ಗೆ ಮಾರ್ಗದರ್ಶನ ಶಿಬಿರ ಇವೇ ಮೊದಲಾದ ಸಮುದಾಯ ಉನ್ನತೀಕರಣ ಉದ್ದೇಶ ಇಟ್ಟುಕೊಂಡು ಸಂಸ್ಥೆಯನ್ನು ರಚಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಸದಾಶಿವ ಬಂಗೇರ ತಿಳಿಸಿದ್ದಾರೆ.




















0 comments:
Post a Comment