ಹಲವು ವರ್ಷಗಳಿಂದ ಡಾಮರೀಕರಣ ಕಾಣದ ನರಿಕೊಂಬು ಶಾಲೆ-ನೆಹರುನಗರ ಸಂಪರ್ಕದ ರಸ್ತೆ : ಶೀಘ್ರ ಪರಿಹಾರಕ್ಕೆ ಆಗ್ರಹ - Karavali Times ಹಲವು ವರ್ಷಗಳಿಂದ ಡಾಮರೀಕರಣ ಕಾಣದ ನರಿಕೊಂಬು ಶಾಲೆ-ನೆಹರುನಗರ ಸಂಪರ್ಕದ ರಸ್ತೆ : ಶೀಘ್ರ ಪರಿಹಾರಕ್ಕೆ ಆಗ್ರಹ - Karavali Times

728x90

20 November 2025

ಹಲವು ವರ್ಷಗಳಿಂದ ಡಾಮರೀಕರಣ ಕಾಣದ ನರಿಕೊಂಬು ಶಾಲೆ-ನೆಹರುನಗರ ಸಂಪರ್ಕದ ರಸ್ತೆ : ಶೀಘ್ರ ಪರಿಹಾರಕ್ಕೆ ಆಗ್ರಹ

 ಬಂಟ್ವಾಳ, ನವೆಂಬರ್ 20, 2025 (ಕರಾವಳಿ ಟೈಮ್ಸ್) : ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ನರಿಕೊಂಬು ಶಾಲೆಯಿಂದ ನೆಹರುನಗರ ಹೆದ್ದಾರಿ ಸಂಪರ್ಕಿಸುವ ಬಹುಪಯೋಗಿ ರಸ್ತೆಯು ಡಾಮರೀಕರಣ ಕಾಣದೆ ಹಲವು ವರ್ಷಗಳಿಂದ ಸೊರಗಿ ಹೋಗಿದ್ದು, ಶೀಘ್ರ ಡಾಮರೀಕರಣಕ್ಕೆ ಜನ ಆಗ್ರಹಿಸಿದ್ದಾರೆ. 

ಈ ರಸ್ತೆಯುದ್ದಕ್ಕೂ ಶಾಲೆ, ಅಂಗನವಾಡಿ, ದೈವಸ್ಥಾನ ಮೊದಲಾದ ಜನ ಸಂಪರ್ಕದ ವ್ಯವಸ್ಥೆಗಳಿದ್ದು, ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿರುವ ಪರಿಣಾಮ ವಾಹನ ಹಾಗೂ ಜನ ಸಂಚಾರ ತೀವ್ರ ತೊಡಕಾಗಿದೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಹಾಗೂ ಶಾಲಾ ವಾಹನಗಳ ಸವಾರರು ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿರುವ ದೃಶ್ಯ ಕಂಡು ಬರುತ್ತಿದೆ. ನರಿಕೊಂಬು ಗ್ರಾಮಕ್ಕೆ ಒಳ ರಸ್ತೆ ಮೂಲಕ ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆ ಇದಾಗಿದ್ದು, ಬಹು ಉಪಯೋಗಿ ರಸ್ತೆಯಾಗಿ ಈ ರಸ್ತೆ ಗುರುತಿಸಿಕೊಂಡಿದೆ. ಸ್ಥಳೀಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರ ಸಹಿತ ವಿವಿಧ ಜನಪ್ರತಿನಿಧಿಗಳಿಗೆ ಈ ರಸ್ತೆಯ ಅವ್ಯವಸ್ಥೆಯ ಬಗ್ಗೆ ನಿರಂತರವಾಗಿ ಹಲವು ಬಾರಿ ಮನವಿ ಸಲ್ಲಿಸಲಾಗಿದ್ದರೂ ಇನ್ನೂ ಈ ರಸ್ತೆಗೆ ಕಾಯಕಲ್ಪ ಒದಗಿ ಬರುವ ಸೂಚನೆಗಳು ಕಂಡು ಬರುತ್ತಿಲ್ಲ ಎನ್ನುವ ಸ್ಥಳೀಯ ನಾಗರಿಕರು ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿವರ್ಗ ಈ ರಸ್ತೆಯ ಸುಸ್ಥಿತಿಗೆ ಸೂಕ್ತ ಕ್ರಮ ಕೈಗೊಂಡು ಗ್ರಾಮಸ್ಥರ ಬಹುಕಾಲದ ಬೇಡಿಕೆಗೆ ಸ್ಪಂದಿಸುವಂತೆ ಆಗ್ರಹಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಹಲವು ವರ್ಷಗಳಿಂದ ಡಾಮರೀಕರಣ ಕಾಣದ ನರಿಕೊಂಬು ಶಾಲೆ-ನೆಹರುನಗರ ಸಂಪರ್ಕದ ರಸ್ತೆ : ಶೀಘ್ರ ಪರಿಹಾರಕ್ಕೆ ಆಗ್ರಹ Rating: 5 Reviewed By: karavali Times
Scroll to Top