ಬಂಟ್ವಾಳ, ನವೆಂಬರ್ 20, 2025 (ಕರಾವಳಿ ಟೈಮ್ಸ್) : ಬಂಟ್ವಾಳ ಫೆಸ್ಟ್ ಇದರ ವತಿಯಿಂದ ಬಂಟ್ವಾಳದಲ್ಲಿ ಪ್ರಪ್ರಥಮ ಬಾರಿಗೆ ಬೃಹತ್ ಗ್ರಾಹಕರ ಮೇಳ, ಅಮ್ಯೂಸ್ ಮೆಂಟ್ ಪಾರ್ಕ್ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಸಮ್ಮಿಲನ “ಬಂಟ್ವಾಳ ಉತ್ಸವ” ನವೆಂಬರ್ 21 ರಿಂದ ಒಂದು ತಿಂಗಳ ಕಾಲ ಬಿ ಸಿ ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ನಡೆಯಲಿದೆ.
ಪ್ರತಿ ದಿನ ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಉತ್ಸವದ ರೂಪದಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, ನವೆಂಬರ್ 21 ರಂದು ಶುಕ್ರವಾರ ಸಂಜೆ 5 ಗಂಟೆಗೆ ಉತ್ಸವ ಉದ್ಘಾಟನೆಗೊಳ್ಳಲಿದೆ. ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ಬಿ ರಮಾನಾಥ ರೈ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ತುಳು ಕೂಟದ ಅಧ್ಯಕ್ಷ ಸುದರ್ಶನ್ ಜೈನ್, ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ, ಉಪಾಧ್ಯಕ್ಷ ಮುನೀಶ್ ಅಲಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ, ಜಿ ಪಂ ನಿಕಟಪೂರ್ವ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಮಾಜಿ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಗೋಲ್ಡನ್ ಪಾರ್ಕ್ ಎಸೋಸಿಯೇಶನ್ ಆಡಳಿತ ಪಾಲುದಾರರಾದ ಬಿ ಅಜಿತ್ ಬರಿಮಾರು, ವಲ್ಲಭೇಶ್ ಶೆಣೈ, ಉದ್ಯಮಿಗಳಾದ ಜಗನ್ನಾಥ ಚೌಟ ಬದಿಗುಡ್ಡೆ, ಹಂಝ ಬಸ್ತಿಕೋಡಿ, ಬಂಟ್ವಾಳ ವಕೀಲರ ಸಂಘದ ಮಾಜಿ ಅಧ್ಯಕ್ಷ ಉಮೇಶ್ ಕುಮಾರ್ ವೈ ಮೊದಲಾದವರು ಭಾಗವಹಿಸುವರು.
ಉತ್ಸವದ ಪ್ರಯುಕ್ತ ನ 21 ರಂದು ಮೊಗರ್ನಾಡು ಸ್ಟೆಪ್ ಝೋನ್ ಡ್ಯಾನ್ಸ್ ಅಕಾಡೆಮಿ ಇವರಿಂದ ಡ್ಯಾನ್ಸ್ ಕಾರ್ಯಕ್ರಮ, ನ 22 ರಂದು ಮಾರುತಿ ನಗರ ಶಾಸ್ತ್ರ ನಾಟ್ಯ ನಿಕೇತನ ಇವರಿಂದ ಭರತ ನಾಟ್ಯ ಕಾರ್ಯಕ್ರಮ, 23 ರಂದು ಇಕ್ಬಾಲ್ ಪರ್ಲಿಯಾ ನೇತೃತ್ವದ ಶಾ ಬ್ಯಾಂಡ್ ಮಂಗಳೂರು ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ, 29 ರಂದು ಮೊಗರ್ನಾಡು ನಿಶಾನಿ ಡ್ಯಾನ್ಸ್ ಕ್ರಿವ್ ಇವರಿಂದ ಡ್ಯಾನ್ಸ್ ಕಾರ್ಯಕ್ರಮ, 30 ರಂದು ರಶೀದ್ ನಂದಾವರ ಬಳಗದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ, ಡಿಸೆಂಬರ್ 6 ರಂದು ಬಿ ಸಿ ರೋಡು ಎಕ್ಸ್ ಡಿ ಸಿ ಡ್ಯಾನ್ಸ್ ಕ್ರಿವ್ ಇವರಿಂದ ಡ್ಯಾನ್ ಕಾರ್ಯಕ್ರಮ, 7 ರಂದು ಶಿವರಂಜಿನಿ ಕಲಾ ಕೇಂದ್ರ ಪೊಳಲಿ, ಬೊಕ್ಕಸ (ರಿ) ಇವರಿಂದ ನೃತ್ಯ ಕಾರ್ಯಕ್ರಮ, 13 ರಂದು ಮೊಗರ್ನಾಡು ಸ್ಟೆಪ್ ಝೋನ್ ಡ್ಯಾನ್ಸ್ ಅಕಾಡೆಮಿ ಇವರಿಂದ ಡ್ಯಾನ್ಸ್ ಕಾರ್ಯಕ್ರಮ, 14 ರಂದು ಅಶ್ರಫ್ ಅಪೋಲೋ ಕಲ್ಲಡ್ಕ ಬಳಗದಿಂದ ಸಂಗೀತ ರಸ ಮಂಜರಿ ಕಾರ್ಯಕ್ರಮ ಹಾಗೂ ಡಿಸೆಂಬರ್ 20 ರಂದು ಸ್ವರ ಸಂಗಮ ಮೆಲೋಡಿಸ್ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮಗಳ ಸಹಿತ ವಿವಿಧ ಮನೋರಂಜನೆ ಕಾರ್ಯಕ್ರಮಗಳು, ವಿನೋದಾವಳಿ ಕಾರ್ಯಕ್ರಮಗಳು ನಡೆಯಲಿದೆ ಎಂದು ಬಂಟ್ವಾಳ ಉತ್ಸವ ವ್ಯವಸ್ಥಾಪಕರು ತಿಳಿಸಿದ್ದಾರೆ.














0 comments:
Post a Comment