ಮಂಗಳೂರು, ನವೆಂಬರ್ 25, 2025 (ಕರಾವಳಿ ಟೈಮ್ಸ್) : ಹಳೆಯಂಗಡಿ ವಲಯ ಮುಸ್ಲಿಂ ಜಮಾತ್ ಒಕ್ಕೂಟದ ಆಶ್ರಯದಲ್ಲಿ ಹಿರಿಯ ಪತ್ರಕರ್ತ, ಸಾಹಿತಿ, ಸಂಘಟಕ ಹಾಗೂ ಸಾಮಾಜಿಕ ಚಿಂತಕ 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಳೆಯಂಗಡಿ ಬೆಳ್ಳಾಯರು ಗ್ರಾಮದ ಸಾಧಕ ಬಿ.ಎಂ. ಹನೀಫ್ ಹಾಗೂ ಸಮಾಜ ಸೇವಕ, ಉದ್ಯಮಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೈಕೃಷ್ಣ ಕೋಟ್ಯಾನ್ ಅವರಿಗೆ ‘ಹುಟ್ಟೂರ ಸನ್ಮಾನ’ ಕಾರ್ಯಕ್ರಮವು ಹಳೆಯಂಗಡಿ ಬಿಲ್ಲವ ಭವನದಲ್ಲಿ ನವೆಂಬರ್ 23 ರಂದು ನಡೆಯಿತು
ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಇರ್ಷಾದ್ ಕದಿಕೆ ಅಧ್ಯಕ್ಷತೆ ವಹಿಸಿದ್ದರು. ಬೊಳ್ಳೂರು ಜುಮಾ ಮಸೀದಿ ಮುದರ್ರುಸ್ ಮುಹಮ್ಮದ್ ಶರೀಫ್ ಅರ್ಷದಿ ಉದ್ಘಾಟಿಸಿದರು. ಕದಿಕೆ ಕೇಂದ್ರ ಜುಮ್ಮಾ ಮಸೀದಿ ಖತೀಬ್ ಅಬ್ದುಲ್ಲಾ ಝೈನಿ ಬಡಗನ್ನೂರು ಶುಭಾಶಯ ಕೋರಿದರು.
ಮುಖ್ಯ ಅತಿಥಿಗಳಾಗಿ ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ, ಸದಸ್ಯ ಅಬ್ದುಲ್ ಅಜೀಜ್, ಹಳೆಯಂಗಡಿ ಅಮ್ಮಾನ್ ಮೆಮೋರಿಯಲ್ ಚರ್ಚ್ ಧರ್ಮಗುರು ಅಮೃತ್ ರಾಜ್ ಖೋಡೆ, ಕದಿಕೆ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರೆಹಮಾನ್ ಕುಡುಂಬೂರು, ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ್ ನಾನಿಲ್, ಪದಾಧಿಕಾರಿಗಳಾದ ಭಾಸ್ಕರ್ ಸಾಲಿಯಾನ್, ಉದಯ ಕುಮಾರ್, ಮೋಹನ್ ಎಸ್ ಸುವರ್ಣ, ಜಯ ಸುವರ್ಣ ಹಳೆಯಂಗಡಿ, ಗಣೇಶ್ ಜಿ ಬಂಗೇರ, ರವಿ ಜಿ ಅಮೀನ್, ಹೇಮನಾಥ ಕರ್ಕೇರ, ಇಂದಿರಾ ನಗರ ತಖ್ವಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಲತೀಫ್ ಲೈಟ್ ಹೌಸ್, ಸಾಗ್ ಬದ್ರಿಯಾ ಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್ ಸಾಗ್, ತೋಕೂರು ಮಸೀದಿ ಅಧ್ಯಕ್ಷ ಅಲ್ತಾಫ್ ಹುಸೇನ್ ಮೆಹೆತಾಬ್, ಸಂತೆಕಟ್ಟೆ ಹಿಮಾಯತುಲ್ ಇಸ್ಲಾಂ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಪಡು ತೋಟ ಭಾಗವಹಿಸಿದ್ದರು.
ಇದೇ ವೇಳೆ ಬಿಲ್ಲವ ಸಮಾಜ ಸೇವಾ ಸಂಘ ಹಳೆಯಂಗಡಿ (ರಿ) ಇದರ ವತಿಯಿಂದ ರಾಜ್ಯ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಗೌರವಾರ್ಪಣೆ ನಡೆಯಿತು.
ಹಳೆಯಂಗಡಿ ವಲಯ ಮುಸ್ಲಿಂ ಜಮಾತ್ ಒಕ್ಕೂಟದ ಕಾರ್ಯದರ್ಶಿ ವಾಹಿದ್ ತೋಕೂರು ಸ್ವಾಗತಿಸಿ, ಹ್ಯಾರಿಸ್ ನವರಂಗ್ ವಂದಿಸಿದರು. ಮಯ್ಯದ್ದಿ ಬೊಳ್ಳೂರು ಕಾರ್ಯಕ್ರಮ ನಿರೂಪಿಸಿದರು.
















0 comments:
Post a Comment