ಮಂಗಳೂರು, ನವೆಂಬರ್ 25, 2025 (ಕರಾವಳಿ ಟೈಮ್ಸ್) : ನಗರದ ನ್ಯಾಯವಾದಿ ಖಾಸಿಂ ನೌಷದ್ ಅವರನ್ನು ಕೊಲೆ ಮಾಡಿ ಜೀವಾವಧಿ ಶಿಕ್ಷೆಗೊಳಗಾಗಿ 11 ವರ್ಷ ಕಾರಾಗೃಹ ವಾಸ ಅನುಭವಿಸಿ ಬಳಿಕ ತಲೆ ಮರೆಸಿಕೊಂಡಿದ್ದ ಆರೋಪಿ ಬೆಳ್ತಂಗಡಿ ತಾಲೂಕು, ನಾಳ, ನಾಯರ್ ತರ್ಪು ಮುಗಳಿ ಹೊಸ ಮನೆ ನಿವಾಸಿ ತಿಮ್ಮಪ್ಪ ಶೆಟ್ಟಿ ಅವರ ಪುತ್ರ ಟಿ ದಿನೇಶ್ ಶೆಟ್ಟಿ ಅಲಿಯಾಸ್ ದಿನ್ನು ಎಂಬಾತನನ್ನು ನಗರ ಪೊಲೀಸರು ನ 25 ರಂದು ಬಂಧಿಸಿದ್ದಾರೆ.
ಈತ ಮಂಗಳೂರು ದಕ್ಷಿಣ ಠಾಣಾ ಅಪರಾಧ ಕ್ರಮಾಂಕ 144/2009 ರ ಕೊಲೆ ಪ್ರಕರಣದಲ್ಲಿ ಭೂಗತ ಲೋಕದ ಪಾತಕಿ ರವಿ ಪೂಜಾರಿ ಮತ್ತು ಕಲಿ ಯೊಗೀಶ್ ಅವರಿಂದ ಸುಪಾರಿ ಪಡೆದು ನ್ಯಾಯವಾದಿ ಖಾಸಿಂ ನೌಷಾದ್ ಅವರನ್ನು ಕೊಲೆ ಮಾಡಿದ ಆರೋಪದ ಮೇರೆಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದರಲ್ಲಿ 11 ವರ್ಷ ಕಾರಾಗೃಹ ಶಿಕ್ಷೆ ಅನುಭವಿಸಿ ನಂತರ ಉಚ್ಛ ನ್ಯಾಯಾಲಯಕ್ಕೆ ಅಫೀಲು ಸಲ್ಲಿಸಿ 2019 ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಗೊಂಡಿರುತ್ತಾನೆ. ನಂತರದ ದಿನಗಳಲ್ಲಿ ಕಾವೂರು ಠಾಣಾ ಅಪರಾಧ ಕ್ರಮಾಂಕ 01/2019 ರ ಅಪಹರಣ ಪ್ರಕರಣ, ಮಂಗಳೂರು ಉತ್ತರ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 88/2022 ರ ವಂಚನೆ ಪ್ರಕರಣ ಮತ್ತು ಮಂಗಳೂರು ಉತ್ತರ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 06/2023ರ ಸುಲಿಗೆ ಪ್ರಕರಣಗಳಲ್ಲಿಯೂ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ಒಂದೂವರೆ ವರ್ಷದಿಂದ ತಲೆ ಮೆರೆಸಿಕೊಂಡವನನ್ನು ನವೆಂಬರ್ 25 ರಂದು ಉತ್ತರ ಉಪವಿಭಾಗ ಎಸಿಪಿ ಹಾಗೂ ಅವರ ತಂಡ ದಸ್ತಗಿರಿ ಮಾಡುವಲ್ಲಿ ಸಫಲವಾಗಿದೆ.














0 comments:
Post a Comment