ಸುಳ್ಯ : ಬೆನಿಫಿಟ್ ಸ್ಕೀಂ ಮೂಲಕ ಸಾರ್ವಜನಿಕರಿಗೆ ವಂಚನೆ ಮಾಡಿದ ಪ್ರಕರಣದ ಮೂವರಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ - Karavali Times ಸುಳ್ಯ : ಬೆನಿಫಿಟ್ ಸ್ಕೀಂ ಮೂಲಕ ಸಾರ್ವಜನಿಕರಿಗೆ ವಂಚನೆ ಮಾಡಿದ ಪ್ರಕರಣದ ಮೂವರಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ - Karavali Times

728x90

19 November 2025

ಸುಳ್ಯ : ಬೆನಿಫಿಟ್ ಸ್ಕೀಂ ಮೂಲಕ ಸಾರ್ವಜನಿಕರಿಗೆ ವಂಚನೆ ಮಾಡಿದ ಪ್ರಕರಣದ ಮೂವರಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ

ಸುಳ್ಯ, ನವೆಂಬರ್ 19, 2025 (ಕರಾವಳಿ ಟೈಮ್ಸ್) : ಸುಳ್ಯ ಕಸಬಾ ಗ್ರಾಮದ ವಿವೇಕಾನಂದ ಸರ್ಕಲ್ ಬಳಿ ಅಂಬಡೆಡ್ಕ ಎಂಬಲ್ಲಿ ಶ್ರಿ ತತ್ವಮಸಿ ಚಾರಿಟೇಬಲ್ ಟ್ರಸ್ಟ್ (ರಿ) ಮತ್ತು ಶ್ರೀ ತತ್ವಮಸಿ ಎಂಟರ್ ಪ್ರೈಸಸ್ (ರಿ) ಎಂಬ ಹೆಸರಿನಲ್ಲಿ ಸಂಸ್ಥೆ ಹೆಸರಿನಲ್ಲಿ ಬೆನಿಫಿಟ್ ಸ್ಕೀಂ ಪ್ರಾರಂಭಿಸಿ, ಏಜೆಂಟರುಗಳ ಮೂಲಕ ಸಾರ್ವಜನಿಕರಿಂದ ಕಂತುಗಳ ಮೂಲಕ ಹಣಸಂಗ್ರಹ ಮಾಡಿ, 4,115 ಸದಸ್ಯರಿಗೆ ಹಣವನ್ನಾಗಲೀ ಯಾವುದೇ ವಸ್ತುವನ್ನಾಗಾಲಿ ನೀಡದೇ 3,08,62,500/- (ಮೂರು ಕೋಟಿ ಎಂಟು ಲಕ್ಷದ ಅರವತ್ತೆರಡು ಸಾವಿರದ ಐನೂರು) ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಶಿವಪ್ರಕಾಶ್, ಕೆ.ಪಿ. ಗಣೇಶ್, ಕೆ.ಪಿ. ಕೃಷ್ಣಪ್ಪ ಗೌಡ, ಗೀತಾ ಕೆ.ಎಸ್.,  ಭಾರತಿ, ಗೀತಾ ಗಣೇಶ್, ಎನ್.ಇ. ವೈ. ಕಮಲಾಕ್ಷ, ಕೆ. ನಾಗೇಶ ಎಂಬವರುಗಳ ವಿರುದ್ಧ ಸುಳ್ಯ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಕ್ರಮಾಂಕ 248/2014 ಪ್ರಕರಣದ  ತನಿಖೆ ನಡೆಸಿದ ಆಗಿನ ಸುಳ್ಯ ಪೆÇಲೀಸ್ ಠಾಣಾಧಿಕಾರಿ ಬ್ರಿಜೇಶ್ ಮಥ್ಯೂ ಅವರು ಪ್ರಕರಣದ ಭಾಗಶಃ ತನಿಖೆ ನಡೆಸಿದ್ದು, ಚಂದ್ರಶೇಖರ್ ಎಚ್ ವಿ ಅವರು ತನಿಖೆ ಪೂರ್ಣಗೊಳಿಸಿ ಎಸ್ ಸಿ ಜೆ ಮತ್ತು ಜೆ ಎಮ್ ಎಫ್ ಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. 

ಸದ್ರಿ ಪ್ರಕರಣದ ವಿಚಾರಣೆಯು ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಬಿ. ಮೋಹನ್ ಬಾಬು ಅವರ ಸಮಕ್ಷಮ ನಡೆದು ಅಕ್ಟೋಬರ್ 30 ರಂದು ಆರೋಪಿಗಳ ಪೈಕಿ 2, 4 ಮತ್ತು 5 ನೇಯವರ ಅಪರಾಧ ಸಾಬೀತಾಗಿ ಅವರುಗಳನ್ನು ದೋಷಿ ಎಂದು ತೀರ್ಮಾನಿಸಲಾಗಿದ್ದು,  ಉಳಿದ ಆರೋಪಿಗಳಾದ 3, 6, 7 ಮತ್ತು 8 ಅವರುಗಳ ಅಪರಾಧ ಸಾಬೀತಾಗದೆ ಅವರುಗಳನ್ನು ಬಿಡುಗಡೆಮಾಡಿ ತೀರ್ಪು ನೀಡಿರುತ್ತಾರೆ. 1ನೇ ಆರೋಪಿಯು ಮರಣ ಹೊಂದಿರುವುದರಿಂದ ಅವರ ಮೇಲಿನ ಪ್ರಕರಣ ಸ್ಥಗಿತಗೊಳಿಸಲಾಗಿದೆ. 

ನವೆಂಬರ್ 3 ರಂದು ಶಿಕ್ಷೆಯ ಪ್ರಮಾಣಕ್ಕಾಗಿ ವಾದ ಮಂಡಿಸಲು ಅವಕಾಶ ನೀಡಿದ ನ್ಯಾಯಾಧೀಶರು ಆರೋಪಿಗಳಾದ 2, 4 ಮತ್ತು 5 ರವರುಗಳಿಗೆ ಕಲಂ 406 ಸಹವಾಚಕ 149 ರಡಿಯಲ್ಲಿ 3 ವರ್ಷಗಳ ಸಾದಾ ಕಾರಾಗೃಹ ವಾಸ, ಕಲಂ 409 ಮತ್ತು 420 ರಡಿಯಲ್ಲಿ ಸಹವಾಚಕ 149 ರೊಂದಿಗೆ ಎರಡೂ ಕಲಂಗಳಿಗೆ ಆರೋಪಿಗಳಿಗೆ ಪ್ರತ್ಯೇಕವಾಗಿ 3 ವರ್ಷಗಳ ಕಾಲ ಸಾದಾ ಕಾರಾಗೃಹ ವಾಸ ಮತ್ತು 10 ಸಾವಿರ ರೂಪಾಯಿ ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ 6 ತಿಂಗಳ ಹೆಚ್ಚುವರಿ ಸಾದಾ ಕಾರಾಗೃಹ ವಾಸ ವಿಧಿಸಲಾಗಿದೆ. ಈ ಮೇಲಿನ ಎಲ್ಲಾ ಶಿಕ್ಷೆಗಳು ಏಕಕಾಲಕ್ಕೆ ಜಾರಿಗೊಳಿಸುವಂತೆ ಆದೇಶಿಸಲಾಗಿದೆ. ಸರ್ಕಾರದ ಪರವಾಗಿ ಪ್ರಕರಣವನ್ನು ಸಹಾಯಕ ಸರ್ಕಾರಿ ಅಭಿಯೋಜಕ ರಮೇಶ್ ಅವರು ವಾದ ಮಂಡಿಸಿದ್ದಾರೆ. 



  • Blogger Comments
  • Facebook Comments

0 comments:

Post a Comment

Item Reviewed: ಸುಳ್ಯ : ಬೆನಿಫಿಟ್ ಸ್ಕೀಂ ಮೂಲಕ ಸಾರ್ವಜನಿಕರಿಗೆ ವಂಚನೆ ಮಾಡಿದ ಪ್ರಕರಣದ ಮೂವರಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ Rating: 5 Reviewed By: karavali Times
Scroll to Top