ಡಬ್ಲ್ಯು.ಸಿ.ಆರ್.ಪಿ. ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಶ್ರೀನಿವಾಸ್ ವಿವಿ ಏವಿಯೇಶನ್ ಸ್ಟಡೀಸ್ ಡೀನ್ ಡಾ. ಪವಿತ್ರಾ ಕುಮಾರಿ ನೇಮಕ - Karavali Times ಡಬ್ಲ್ಯು.ಸಿ.ಆರ್.ಪಿ. ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಶ್ರೀನಿವಾಸ್ ವಿವಿ ಏವಿಯೇಶನ್ ಸ್ಟಡೀಸ್ ಡೀನ್ ಡಾ. ಪವಿತ್ರಾ ಕುಮಾರಿ ನೇಮಕ - Karavali Times

728x90

4 December 2025

ಡಬ್ಲ್ಯು.ಸಿ.ಆರ್.ಪಿ. ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಶ್ರೀನಿವಾಸ್ ವಿವಿ ಏವಿಯೇಶನ್ ಸ್ಟಡೀಸ್ ಡೀನ್ ಡಾ. ಪವಿತ್ರಾ ಕುಮಾರಿ ನೇಮಕ

ಮಂಗಳೂರು, ಡಿಸೆಂಬರ್ 05, 2025 (ಕರಾವಳಿ ಟೈಮ್ಸ್) : ವಿಶ್ವಾದ್ಯಂತ ಗ್ರಾಹಕ ಹಕ್ಕುಗಳು ಮತ್ತು ರಕ್ಷಣೆ  (ಡಬ್ಲ್ಯು ಸಿ ಆರ್ ಪಿ) ಸಂಸ್ಥೆಯ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಡಾ ಪವಿತ್ರಾ ಕುಮಾರಿ ಅವರು ನೇಮಕಗೊಂಡಿದ್ದಾರೆ. ಇವರು ಬಿಎ (ಕಾನೂನು), ಎಲ್.ಎಲ್.ಬಿ., ಎಲ್.ಎಲ್.ಎಂ., ಎಂ.ಕಾಂ ಹಾಗೂ ಪಿ.ಎಚ್.ಡಿ ಪದವಿಗಳೊಂದಿಗೆ ಅತ್ಯುತ್ತಮ ವಿದ್ಯಾರ್ಹತೆ ಹೊಂದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಒಟ್ಟು 16 ವರ್ಷಗಳ ಸಮೃದ್ಧ ಅನುಭವ ಹೊಂದಿರುವ ಅವರು, ಶೈಕ್ಷಣಿಕ ಹಾಗೂ ಕಾನೂನು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.

ಡಾ ಪವಿತ್ರಾ ಕುಮಾರಿ ಅವರು ಪ್ರಸ್ತುತ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಏವಿಯೇಷನ್ ಸ್ಟಡೀಸ್ ಇದರ ಡೀನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಲವಾದ ನಾಯಕತ್ವ, ಸಮಗ್ರ ಜ್ಞಾನ ಮತ್ತು ಕಾನೂನು ಶೈಕ್ಷಣಿಕ ಕ್ಷೇತ್ರಗಳಿಗೆ ನೀಡಿರುವ ಮಹತ್ವದ ಕೊಡುಗೆಗಳಿಂದ ಅವರು ಪ್ರಸಿದ್ಧರಾಗಿದ್ದಾರೆ.

ಕಾನೂನು ಶಿಕ್ಷಣದಲ್ಲಿನ ಅವರ ವ್ಯಾಪಕ ಪರಿಣತಿ, ಗ್ರಾಹಕರ ಹಕ್ಕುಗಳ ಜಾಗೃತಿ ಹಾಗೂ ಶಿಕ್ಷಣದ ಕ್ಷೇತ್ರಗಳಲ್ಲಿ ಹೊಸ ಉಪಕ್ರಮಗಳನ್ನು ಉತ್ತೇಜಿಸಲು ನೆರವಾಗಲಿದೆ ಎಂದು ಡಬ್ಲ್ಯು ಸಿ ಆರ್ ಪಿ ಸಂಸ್ಥೆಯ ಅಧಿಕಾರಿಗಳು ವಿಶ್ವಾಸವ್ಯಕ್ತಪಡಿಸಿದ್ದಾರೆ.

ಡಬ್ಲ್ಯು ಸಿ ಆರ್ ಪಿ ಸಂಸ್ಥೆಯು ಡಾ ಪವಿತ್ರಾ ಕುಮಾರಿ ಅವರ ನೇಮಕವನ್ನು ಹರ್ಷದಿಂದ ಸ್ವಾಗತಿಸಿದೆ. ಕರ್ನಾಟಕದಲ್ಲಿ ಗ್ರಾಹಕರ ಹಕ್ಕು ರಕ್ಷಣೆಯನ್ನು ಬಲಪಡಿಸಲು ಮತ್ತು ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರಲು ಅವರ ನಾಯಕತ್ವ ಮಹತ್ವದ ಪಾತ್ರ ವಹಿಸಲಿದೆ ಎಂದು ಶ್ರೀನಿವಾಸ ವಿಶ್ವವಿದ್ಯಾಲಯ ಕೂಡ ಅಭಿನಂದಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಡಬ್ಲ್ಯು.ಸಿ.ಆರ್.ಪಿ. ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಶ್ರೀನಿವಾಸ್ ವಿವಿ ಏವಿಯೇಶನ್ ಸ್ಟಡೀಸ್ ಡೀನ್ ಡಾ. ಪವಿತ್ರಾ ಕುಮಾರಿ ನೇಮಕ Rating: 5 Reviewed By: karavali Times
Scroll to Top