ಬಂಟ್ವಾಳ, ಡಿಸೆಂಬರ್ 23, 2025 (ಕರಾವಳಿ ಟೈಮ್ಸ್) : ಕಾರು ಡಿಕ್ಕಿ ಹೊಡೆದು ಹೆದ್ದಾರಿ ದಾಟುತ್ತಿದ್ದ ವ್ಯಕ್ತಿ ಗಾಯಗೊಂಡ ಘಟನೆ ಮಾಣಿ ಎಂಬಲ್ಲಿ ಡಿ 21 ರಂದು ಸಂಜೆ ಸಂಭವಿಸಿದೆ.
ಗಾಯಗೊಂಡ ವ್ಯಕ್ತಿಯನ್ನು ಮೂಲತಃ ಬಾಗಲಕೋಟೆ ನಿವಾಸಿ, ಪ್ರಸ್ತು ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿರುವ ನಾಗೇಶ್ ರಾಠೋಡ್ ಎಂದು ಹೆಸರಿಸಲಾಗಿದೆ. ಇವರು ನಾಗೇಶ್ ಚೌವಾನ್ ಎಂಬವರ ಜೊತೆ ವೈಯುಕ್ತಿಕ ಕೆಲಸದ ನಿಮಿತ್ತ ಮಾಣಿಗೆ ಬಂದು ವಾಪಾಸು ಕುದ್ರೆಬೆಟ್ಟು ಎಂಬಲ್ಲಿಗೆ ಹೋಗುವರೇ ಸಂಜೆ ಸುಮಾರು 6.30 ರ ವೇಳೆಗೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿರುವಾಗ ಕಲ್ಲಡ್ಕ ಕಡೆಯಿಂದ ಮಾಣಿ ಕಡೆಗೆ ಧಾವಿಸಿ ಬಂದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ನಾಗೇಶ್ ರಾಠೋಡ್ ಅವರಿಗೆ ಗಾಯವಾಗಿದ್ದು, ಅವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಎ ಜೆ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment