ಕೇಪು ಅಕ್ರಮ ಕೋಳಿ ಅಂಕದ ಸ್ಥಳಕ್ಕೆ 2ನೇ ದಿನವೂ ವಿಟ್ಲ ಪೊಲೀಸರ ದಾಳಿ : ಬಿಜೆಪಿ ನಾಯಕರ ಸಹಿತ 27 ಮಂದಿಯ ವಿರುದ್ದ ಪ್ರಕರಣ ದಾಖಲು - Karavali Times ಕೇಪು ಅಕ್ರಮ ಕೋಳಿ ಅಂಕದ ಸ್ಥಳಕ್ಕೆ 2ನೇ ದಿನವೂ ವಿಟ್ಲ ಪೊಲೀಸರ ದಾಳಿ : ಬಿಜೆಪಿ ನಾಯಕರ ಸಹಿತ 27 ಮಂದಿಯ ವಿರುದ್ದ ಪ್ರಕರಣ ದಾಖಲು - Karavali Times

728x90

21 December 2025

ಕೇಪು ಅಕ್ರಮ ಕೋಳಿ ಅಂಕದ ಸ್ಥಳಕ್ಕೆ 2ನೇ ದಿನವೂ ವಿಟ್ಲ ಪೊಲೀಸರ ದಾಳಿ : ಬಿಜೆಪಿ ನಾಯಕರ ಸಹಿತ 27 ಮಂದಿಯ ವಿರುದ್ದ ಪ್ರಕರಣ ದಾಖಲು

ಬಂಟ್ವಾಳ, ಡಿಸೆಂಬರ್ 21, 2025 (ಕರಾವಳಿ ಟೈಮ್ಸ್) : ಕೇಪು ಗ್ರಾಮದ ಕೇಪು ಎಂಬಲ್ಲಿ ಮುರಳೀಧರ ರೈ ಎಂಬವರ ಗದ್ದೆಯಲ್ಲಿ ಎರಡನೇ ದಿನವಾದ ಭಾನುವಾರವೂ ಅಕ್ರಮ ಕೋಳಿ ಅಂಕ ನಡೆದಿದ್ದು, ಮತ್ತೆ ದಾಳಿ ನಡೆಸಿದ ವಿಟ್ಲ ಪೊಲೀಸರು 20 ಹುಂಜ ಸಹಿತ 20 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಲ್ಲದೆ ಕೃತ್ಯಕ್ಕೆ ಪ್ರಚೋದನೆ ಹಾಗೂ ದುಷ್ಪ್ರೇರಣೆ ನೀಡಿದ ಆರೋಪದಲ್ಲಿ 7 ಮಂದಿ ಬಿಜೆಪಿ ನಾಯಕರ ವಿರುದ್ದವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಡಿ 21 ರಂದು ಬೆಳಿಗ್ಗೆ ಕೇಪು ಗ್ರಾಮದ ಕೇಪು ಎಂಬಲ್ಲಿ ಮುರಳೀಧರ ರೈ ಎಂಬವರ ಬಾಬ್ತು ಗದ್ದೆಯಲ್ಲಿ, ಹಲವು ಜನರು ಸೇರಿ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ವಿಟ್ಲ ಪೊಲೀಸ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಠಾಣಾ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಕೇಪು ಗ್ರಾಮದ ಕೇಪು ಮುರಳೀಧರ ರೈ ಎಂಬವರ ಬಾಬ್ತು ಗದ್ದೆಯಲ್ಲಿ, ಹಲವಾರು ಜನರು ಗುಂಪು ಸೇರಿಕೊಂಡು ಹಿಂಸಾತ್ಮಕವಾಗಿ ಕೋಳಿ ಅಂಕ ಆಟವಾಡುತ್ತಿರುವುದು ಕಂಡುಬಂದಿರುತ್ತದೆ. ಅಲ್ಲಿ ನೆರೆದಿದ್ದ ಜನರಿಗೆ ಅಕ್ರಮ ಕೋಳಿ ಅಂಕದ ಬಗ್ಗೆ ಕಾನೂನು ತಿಳುವಳಿಕೆ ನೀಡಿದರೂ, ಸೇರಿದ್ದ ಜನರು ಸ್ಥಳದಿಂದ ತೆರಳದೇ ನಿಂತುಕೊಂಡಿರುತ್ತಾರೆ ಹಾಗೂ ಸ್ಥಳದಲ್ಲಿ ಹಾಜರಿದ್ದ ಸಂಜೀವ ಮಠಂದೂರು, ಮುರಳೀಧರ ರೈ, ಸತೀಶ ಕುಂಪಲ, ದಯಾನಂದ ಉಜಿರೆಮಾರು, ಹರಿಪ್ರಸಾದ್ ಯಾದವ್, ಅಶೋಕ ಶೆಟ್ಟಿ ವಿಟ್ಲ, ರಾಜೇಶ್ ಬಾಳೆಕಲ್ಲು ಎಂಬವರುಗಳು ಅಲ್ಲಿ ಸೇರಿದ್ದ ಜನರಿಗೆ ಕಾನೂನು ಬಾಹಿರ ಕೋಳಿ ಅಂಕವನ್ನು ಮುಂದುವರಿಸುವಂತೆ ಪ್ರಚೋದನೆ ಮತ್ತು ದುಷ್ಪ್ರೇರಣೆಯನ್ನು ನೀಡಿರುತ್ತಾರೆ. 

ಮುಂದುವರೆದಂತೆ ಅಗತ್ಯ ಪೊಲೀಸ್ ಭದ್ರತೆಯನ್ನು ಏರ್ಪಡಿಸಿ, ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ 20 ಜನರನ್ನು ವಶಕ್ಕೆ ಪಡೆದು, ಸ್ಥಳದಲ್ಲಿದ್ದ 20 ಹುಂಜ ಕೋಳಿಗಳನ್ನು ಹಾಗೂ ಕೋಳಿ ಅಂಕಕ್ಕೆ ಬಳಸುವ ಕತ್ತಿ (ಬಾಲು) ಗಳನ್ನು ಸ್ವಾಧೀನಪಡಿಸಲಾಗಿದ್ದು, ಸದ್ರಿ ಕಾನೂನು ಬಾಹಿರ ಕೃತ್ಯಕ್ಕೆ ಪ್ರಚೋದನೆ ಮತ್ತು ದುಷ್ಪ್ರೇರಣೆ ನೀಡಿದವರು ಹಾಗೂ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದವರು ಸೇರಿ ಒಟ್ಟು 27 ಜನರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

ಶನಿವಾರ ನಡೆದ ಮೊದಲ ದಿನದ ಅಕ್ರಮ ಕೋಳಿ ಅಂಕದ ಸಂದರ್ಭ ದಾಳಿ ನಡೆಸಿದ್ದ ವಿಟ್ಲ ಪೊಲೀಸರು 16 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದರಲ್ಲದೆ ಕೃತ್ಯಕ್ಕೆ ಪ್ರಚೋದನೆ ಹಾಗೂ ದುಷ್ಪ್ರೇರಣೆ ನೀಡಿದ ಆರೋಪದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ವಿರುದ್ದವೂ ಪ್ರಕರಣ ದಾಖಲಿಸಿಕೊಂಡಿದ್ದರು. ಇಲ್ಲಿನ ಅಕ್ರಮ ಕೋಳಿ ಅಂಕ ಕೃತ್ಯದಲ್ಲಿ ಕಾಂಗ್ರೆಸ್-ಬಿಜೆಪಿ ಪಕ್ಷಗಳ ನಾಯಕರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಸವಾಲೆಸೆದಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕೇಪು ಅಕ್ರಮ ಕೋಳಿ ಅಂಕದ ಸ್ಥಳಕ್ಕೆ 2ನೇ ದಿನವೂ ವಿಟ್ಲ ಪೊಲೀಸರ ದಾಳಿ : ಬಿಜೆಪಿ ನಾಯಕರ ಸಹಿತ 27 ಮಂದಿಯ ವಿರುದ್ದ ಪ್ರಕರಣ ದಾಖಲು Rating: 5 Reviewed By: karavali Times
Scroll to Top