ಬಂಟ್ವಾಳ, ಡಿಸೆಂಬರ್ 12, 2025 (ಕರಾವಳಿ ಟೈಮ್ಸ್) : ಅಟೋ ರಿಕ್ಷಾ ಪಲ್ಟಿಯಾಗಿ ಚಾಲಕ ಹಾಗೂ ನಾಲ್ಕು ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ನೆಟ್ಲಮುಡ್ನೂರು ಗ್ರಾಮದ ಸದ್ಗುರು ಹೋಟೆಲ್ ಬಳಿ ಡಿ 11 ರಂದು ರಾತ್ರಿ ಸಂಭವಿಸಿದೆ.
ಗಾಯಗೊಂಡವರನ್ನು ಬರಿಮಾರು ಗ್ರಾಮದ ಕಲ್ಲೆಟ್ಟ ನಿವಾಸಿ ಮಾಧವ ಪೂಜಾರಿ ಅವರ ಪತ್ನಿ ಸುಮಿತ್ರಾ (43) ಅವರ ಪುತ್ರಿ ಚೈತನ್ಯ, ನೆರೆ ಮನೆಯ ವಿಶಾಲಾಕ್ಷಿ, ಅವರ ಪುತ್ರಿ ಧನ್ಯಶ್ರೀ ಹಾಗೂ ಅಟೋ ಚಾಲಕ ವಿನಯ ಎಂದು ಹೆಸರಿಸಲಾಗಿದೆ.
ಸುಮಿತ್ರಾ ಹಾಗೂ ವಿಶಾಲಾಕ್ಷಿ ಅವರುಗಳು ತಮ್ಮ ಪುತ್ರಿಯರ ಜೊತೆ ಡಿ 11 ರಂದು ರಾತ್ರಿ 8.30 ಗಂಟೆಗೆ ನೇರಳಕಟ್ಟೆ ಜನಪ್ರಿಯ ಹಾಲ್ ನಿಂದ ಸಂಬಂಧಿಕರ ಮದುವೆ ಮುಗಿಸಿಕೊಂಡು ಮರಳಿ ಬರುವಾಗ ನೆಟ್ಲಮೂಡ್ನೂರು ಗ್ರಾಮದ ಸದ್ಗುರು ಹೋಟೆಲ್ ಬಳಿ ತಲುಪಿದಾಗ ಮಾಣಿ-ಪುತ್ತೂರು ರಸ್ತೆಯಲ್ಲಿ ರಾತ್ರಿ 9.45 ರ ವೇಳೆಗೆ ಆಟೋ ರಿಕ್ಷಾ ಚಾಲಕನ ನಿಯಂತ್ರಣ ಮೀರಿ ಪಲ್ಟಿಯಾಗಿ ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಪ್ರಯಾಣಿಕರು ಹಾಗೂ ಚಾಲಕನಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯರು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment